ಸೊಂಟಕ್ಕೆ ವೇಲು ಸುತ್ತಿಕೊಂಡು ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ರಾಮನಗರ: ಇಲ್ಲೊಬ್ಬ ಕಾರ್ ಡ್ರೈವರ್​ ಸೊಂಟಕ್​ ವೇಲು ಸುತ್ತಿಕೊಂಡು, ತನ್ನ ಪ್ರೀತಿಯ ಹುಡುಗಿಯೊಂದಿಗೆ ಬೆಟ್ಟದ್​ ಮೇಲಿಂದ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳನ್ನು ತಮಿಳುನಾಡು ಮೂಲದ ಸತೀಶ್​ (21) ಹಾಗೂ ಕನಕಪುರದ ಚಂದನಾ (21) ಎಂದು ಗುರುತಿಸಲಾಗಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು, ಮೂರು ವರ್ಷದಿಂದ ಪ್ರೀತಿಸುತ್ತಿದ್ದ ಈ ಪ್ರೇಮಿಗಳು ಸೊಂಟಕ್ಕೆ ದುಪ್ಪಟ್ಟ ಸುತ್ತಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸತೀಶ್ ಹೊಸೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದು, ಇಬ್ಬರೂ ಕೂಡ ಕಳೆದ ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸಿದ್ದರು. ಆದರೆ ಒಂದು ವರ್ಷದ ಹಿಂದೆ ಚಂದನಾ ಮದುವೆ ಮಾಡಲಾಗಿತ್ತು ಎನ್ನಲಾಗಿದೆ. ಚಂದನಾ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈ ಕುರಿತು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಮ್ಮ ಕಾಮೆಂಟ್ ಬರೆಯಿರಿ

advertisement