ಕುಮಟಾ; ಭಾರತ ಬಂದ್‌ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಕುಮಟಾ;ಭಾರತ ಬಂದ್ ಗೆ ಬೆಂಬಲ ಸೂಚಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ರಾಷ್ಟ್ರಿಯ ಹೆದ್ದಾರಿ ೬೬ ರ ಮಣಕಿ ಮೈದಾನದಿಂದ ತಹಶೀಲ್ದಾರ ಕಚೇರಿಯ ವರೆಗೆ ಮೆರವಣಿಗೆಯ ಮೂಲಕ ಸಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಲಾಯಿತು.
ಬಿಸಿಯೂಟ ತಯಾರಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು.ನಂತರ ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಸಭೆ ನಡೆಸಿದರು. ಕೃಷಿ ಕಾಯ್ದೆಗಳು,ವಿದ್ಯುತ್ ಮಸೂದೆ ರದ್ದತಿ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೇಲೆ ಕಾನೂನು, ಅಡುಗೆ ಅನಿಲ,ಪೆಟ್ರೋಲ್ ಬೆಲೆ ಏರಿಕೆ ಕಡಿತಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಭೂ-ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಇತ್ಯಾದಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸಂಘಟನಾ ಕಾರ್ಯದರ್ಶಿ ಮಂಗಲಾ ಭಂಡಾರಿ,ಬಿಸಿಯೂಟನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕಾ ಅಧ್ಯಕ್ಷೆ ಸವಿತಾ ತನ್ಮಡಗಿ ಮತ್ತಿತರರು ಇದ್ದರು.
ನೀರಸ ಪ್ರತಿಕ್ರಿಯೆ;ಭಾರತ ಬಂದ್ ಹೆಸರಿನಲ್ಲಿ ನಡೆದ ಮೆರವಣಿಗೆಯಲ್ಲಿ ಸಂಬಂಧಿಸಿ ಸಂಘಗಳ ಕಾರ್ಯಕರ್ತೆಯರು ತಮ್ಮ ಸಂಘದ ಬೇಡಿಕೆಗೆ ಹೆಚ್ಚು ಒತ್ತು ನೀಡಿದ್ದು ಬಿಟ್ಟರೆ ಕೃಷಿ ಕಾನೂನು ವಿರೋಧಿ ಪ್ರತಿಭಟನೆ ಎನ್ನುವದು ಗೌಣವಾಗಿತ್ತು.. ಇತರೆ ಆರ್ಥಿಕ ಚಟುವಟಿಕೆ ಯಥಾಸ್ಥಿತಿಯಲ್ಲಿತ್ತು.ಮಾರಾಟ ಮಳಿಗೆ ಯಥಾಸ್ಥಿತಿಯಲ್ಲಿತ್ತು. ಸಾರಿಗೆಯಲ್ಲೂ ಯಾವುದೇ ವ್ಯತ್ಯಯ ಕಂಡು ಬರಲಿಲ್ಲ.ಶಾಲಾ ಕಾಲೇಜುಗಳು ತೆರೆದಿದ್ದವು. ರೈತ ಪ್ರಮುಖರಾಗಲಿ, ಮುಖಂಡರಾಗಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕಂಡುಬಂದಿಲ್ಲ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement