ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಬಹುಮಹಡಿ ಕಟ್ಟಡ ನೆಲಸಮ

ಬೆಂಗಳೂರು: ಲಕ್ಕಸಂದ್ರ ಬಳಿ ಮೂರು ಅಂತಸ್ತಿನ ಕಟ್ಟಡ ನೆಲಸಮವಾಗಿದೆ. ಮನೆ ಕುಸಿದು ಬೀಳುವ ದೃಶ್ಯ ಸೆರೆಯಾಗಿದ್ದು ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಕಟ್ಟಡದಲ್ಲಿ 20 ಕ್ಕೂ ಅಧಿಕ ಮಂದಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಕುಸಿದ ಕಟ್ಟಡ ಹಳೆಯದಾಗಿದೆ. ಕಟ್ಟಡದಲ್ಲಿ ವಾಸಕ್ಕೆ ಯೋಗ್ಯವಲ್ಲದ ಕಾರಣ ಹಾಗೂ ಕಟ್ಟಡ ವಾಲಿದ್ದರಿಂದಾಗಿ  ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಮುಂದೆ ಉಂಟಾಗುತ್ತಿದ್ದಂತ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.

ಕಟ್ಟಡ ಕುಸಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮುನ್ನ ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ತೆರವುಗೊಳಿಸಿತ್ತು. 1974ರಲ್ಲಿ ಮೂರು ಅಂತಸ್ತಿನ ಮನೆ ನಿರ್ಮಾಣವಾಗಿತ್ತು. ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್​ನಲ್ಲಿರುವ ಮನೆ ಕುಸಿದಿದ್ದು, ಸುರೇಶ್ ಎಂಬುವವರಿಗೆ ಕಟ್ಟಡ ಸೇರಿದೆ. ಕಟ್ಟಡದಲ್ಲಿ ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಸಿಬ್ಬಂದಿಗಳಿದ್ದರು. ಕಟ್ಟಡ ಕುಸಿದು ಬೀಳುವ ಮಾಹಿತಿ ಮೊದಲೇ ಗೊತ್ತಾದ ಕಾರಣ ಕಾರ್ಮಿಕರು ಹೊರ ಹೋಗಿದ್ದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement