ಮೃತ ಪತ್ನಿ ನೆನಪಲ್ಲಿ ದೇವಾಲಯ ನಿರ್ಮಾಣ ಮಾಡಿದ ಪತಿ, ನಿತ್ಯವೂ ಪೂಜೆ.. !

ನವದೆಹಲಿ : ವ್ಯಕ್ತಿಯೋರ್ವ ತನ್ನ ಮೃತ ಪತ್ನಿಯ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲ ಪ್ರೀತಿಯ ಪತ್ನಿಗೆ ಪೂಜೆ ಸಲ್ಲಿಸಿ ಅಪರೂಪದ ಪ್ರೇಮ ತೋರುತ್ತಿದ್ದಾರೆ.
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಸಂಪಖೇಡಾ ಗ್ರಾಮದ ನಾರಾಯಣ್‌ ಸಿಂಗ್‌ ರಾಥೋಡ್‌ ಅವರ ಪತ್ನಿ ಗೀತಾ ಬಾಯಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ ಪತ್ನಿಯ ನೆನಪು ನಾರಾಯಣ್‌ ಸಿಂಗ್‌ ಅವರನ್ನು ಕಾಡುತ್ತಲೇ ಇತ್ತು. ಇದೇ ಕಾರಣಕ್ಕೆ ಅವರು ಮಕ್ಕಳ ಸಹಕಾರದಿಂದ ಪತ್ನಿಗಾಗಿ ದೇವಸ್ಥಾನವನ್ನೇ ನಿರ್ಮಾಣ ಮಾಡಿದ್ದಾರೆ. ಶಾಜಾಪುರ ಜಿಲ್ಲಾ ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಈ ಪತ್ನಿಯ ದೇವಾಲಯದಲ್ಲಿ ನಿತ್ಯವೂ ಪತ್ನಿಯನ್ನು ದೇವತೆಯ ಸ್ವರೂಪದಲ್ಲಿ ಪೂಜೆ ಮಾಡುತ್ತಿದ್ದಾರೆ.
ಪತ್ನಿ ಗೀತಾ ಮೃತಪಟ್ಟ ಮೂರನೇ ದಿನ, ಕುಟುಂಬವು ರಾಜಸ್ಥಾನದ ಅಲ್ವಾರ್ ಮೂಲದ ಶಿಲ್ಪಿಯೊಬ್ಬರನ್ನು ಸಂಪರ್ಕಿಸಿತ್ತು. ಗೀತಾ ವಿಗ್ರಹವನ್ನು ರಚಿಸುವಂತೆ ಕೇಳಿಕೊಂಡಿತ್ತು. ಅಂತೆಯೇ ಸುಮಾರು ಎರಡು ತಿಂಗಳಲ್ಲಿ ಗೀತಾ ವಿಗ್ರಹ ನಿರ್ಮಾಣವಾಗಿತ್ತು. ವಿಗ್ರಹ ಸುಮಾರು ಮೂರು ಅಡಿ ಎತ್ತರವಿದೆ. ದೇವಸ್ಥಾನದಲ್ಲಿ ಗೀತಾ ಮೂರ್ತಿ ಪ್ರತಿಷ್ಠಾಪಿಸುವ ಮೊದಲು ಕುಟುಂಬದ ಸದಸ್ಯರು ಎಲ್ಲಾ ಆಚರಣೆಗಳನ್ನು ಮಾಡಿದರು. ಈಗ ಅವರು ಪ್ರತಿ ದಿನ ಮೂರ್ತಿಯನ್ನು ಪೂಜಿಸುತ್ತಿದ್ದಾರೆ.
ರಾಥೋಡ್ ಅವರ ಹಿರಿಯ ಮಗ ಲಕ್ಕಿ ಅವರಿಗೆ ತಾಯಿ ತಮ್ಮ ಜೊತೆಯಲ್ಲಿಯೇ ಇದ್ದಾರೆಂಬ ಭಾವನೆಯಿದೆ ಎನ್ನುತ್ತಿದ್ದಾರೆ. ಈ ದೇವಸ್ಥಾನ ಮತ್ತು ಅದರ ವಿಗ್ರಹವನ್ನು ನಿರ್ಮಿಸಿದ ನಂತರ ನನ್ನ ತಾಯಿಯ ಮೇಲಿನ ಪ್ರೀತಿ ಯಾವಾಗಲೂ ನಮ್ಮಲ್ಲಿ ಉಳಿಯುತ್ತದೆ. ನಾವು ಪ್ರತಿದಿನ ದೇವಸ್ಥಾನದಲ್ಲಿ ವಿಧಿಗಳನ್ನು ಮಾಡುತ್ತೇವೆಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement