ವಿದ್ಯಾರ್ಥಿಗಳ ಬಸ್‌‌ಪಾಸ್‌ ಅವಧಿ ವಿಸ್ತರಣೆ: ಉಚಿತ ಪ್ರಯಾಣಕ್ಕೆ ಅವಕಾಶ

ಹುಬ್ಬಳ್ಳಿ: 2020-21 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಅಂತಿಮ ವರ್ಷದ ತರಗತಿ/ ಪರೀಕ್ಷೆಗಳು ಬಾಕಿ ಇರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿಯಮಾಳಿಯನ್ವಯ ಅಗತ್ಯ ಶುಲ್ಕ ಆಕರಣೆಯೊಂದಿಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿತ್ತು. ಆದರೆ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿ/ ಪರೀಕ್ಷಾ ಹಿತದೃಷ್ಟಿಯಿಂದ 2020-21 ನೇ ಸಾಲಿನ ಬಸ್ ಪಾಸ್ ಆಧಾರದ ಮೇಲೆ ನವ್ಹೆಂಬರ್ ವರೆಗೆ ಪರೀಕ್ಷೆ ಮುಗಿಯುವ ತನಕ ಉಚಿತ ಪ್ರಯಾಣಿಸಲು ಅವಕಾಶ ಕಲ್ಪಿಸಿ ಬಸ್‌ಪಾಸ್ ಅವಧಿ ವಿಸ್ತರಿಸಲಾಗಿದೆ.
2020-21 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಪದವಿ/ ಡಿಪ್ಲೋಮಾ/ ಐಟಿಐ/ ವೃತ್ತಿಪರ ಕೋರ್ಸ/ ಸಂಜೆ ಕಾಲೇಜು/ ಪಿಎಚ್‌ಡಿ/ ವಿದ್ಯಾರ್ಥಿಗಳ ತರಗತಿ/ ಪರೀಕ್ಷೆಗಳು ಮುಕ್ತಾಯವಾಗದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷಾ ದಿನಾಂಕ ಮುಕ್ತಾಯ ಗರಿಷ್ಠ ನವೆಂಬರ್‌-2021ರ ವರೆಗೆ ಬಸ್‌ಪಾಸ್ ಅವಧಿ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ಸಂಸ್ಥೆಯ ನಿಗದಿತ ಬಸ್ ಪಾಸ್ ಕೌಂಟರ್‌ಗಳಲ್ಲಿ ಅಗತ್ಯ ದೃಢೀಕೃತ ದಾಖಲಾತಿ ಸಲ್ಲಿಸಿ ಬಸ್‌ಪಾಸ್ ಅವಧಿ ವಿಸ್ತರಣೆಯ ಸಹಿ ಹಾಗೂ ಮೊಹರನ್ನು ಪಡೆದು ಪ್ರಯಾಣಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

4.4 / 5. 8

ನಿಮ್ಮ ಕಾಮೆಂಟ್ ಬರೆಯಿರಿ

advertisement