55 ವಷಗಳ ವರ್ಷದ ಹಿಂದೆ ಸಂಚಾರ ಆರಂಭಿಸಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೇಗಿತ್ತು ಗೊತ್ತಾ..?!

ಬೆಂಗಳೂರು: ಕೆಎಸ್​ಆರ್​ಟಿಸಿ ಹಾಗೂ ಖಾಸಗಿಯಲ್ಲಿ ಸ್ಲೀಪರ್ ಬಸ್​ಗಳು ಸಾಮಾನ್ಯ. ಆದರೆ, ಈ ಆರಾಮದಾಯಕ ಬಸ್​ಗಳು ಕರ್ನಾಟಕದಲ್ಲಿ ಸಂಚರಿಸಲು ಯಾವಾಗ ಆರಂಭವಾಯಿತು? ಹೇಗೆ ಆರಂಭವಾಯಿತು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸ್ಲೀಪರ್‌ ಬಸ್ಸುಗಳು ಕರ್ನಾಟಕದಲ್ಲಿ ಸ್ಲೀಪರ್ ಬಸ್​ಗಳು ಓಡಾಡಲು ತೊಡಗಿ 55 ವರ್ಷಗಳೇ ಆಗಿವೆ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್​ಗಳ ಸಂಚಾರ 1966ರಲ್ಲಿ ಆರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ 55 ವರ್ಷಗಳ ಹಿಂದೆ ಸ್ಲೀಪರ್ ಬಸ್​ ಸಂಚಾರವನ್ನು ಆರಂಭ ಮಾಡಲಾಯಿತು. ಆಗ ಬಸ್​ನಲ್ಲಿ ಮಲಗಿಕೊಂಡು ಹೋಗಬಹುದು ಎಂಬ ಕಲ್ಪನೆಯೇ ಬಹಳ ಹೊಸದಾಗಿತ್ತು. ಹೀಗಾಗಿ, ಆಗ ಹೊಸ ರೂಪದ ಬಸ್​ ನೋಡಲು ಶಾಂತಿನಗರ ಬಸ್​ ನಿಲ್ದಾಣಕ್ಕೆ ನೂರಾರು ಜನರು ಸೇರಿದ್ದರು. ಬೆಡ್​ಗಳಿದ್ದ ಬಸ್​ ಅನ್ನು ನೋಡಿ ಜನರು ಪುಳಕಿತರಾಗಿದ್ದರು. ಆ ಬಸ್​ನಲ್ಲಿ ಫ್ಯಾನ್, ರೇಡಿಯೋ ಹಾಗೇ ರೆಕಾರ್ಡ್ ಪ್ಲೇಯರ್ ಮತ್ತು ಟೆಲಿಫೋನ್ ಕೂಡ ಇತ್ತು.
ರಸ್ತೆ ಮೇಲೆ ರೈಲಿನ ರೀತಿಯಲ್ಲಿ ಬ್ಯುಸಿನೆಸ್ ಕ್ಲಾಸ್​ನ ಬಸ್​ ಸಂಚಾರ ಆರಂಭಿಸಿ 55 ವರ್ಷಗಳಾಯಿತು. ಕರ್ನಾಟಕದಲ್ಲಿ ಸಂಚಾರ ಆರಂಭ ಮಾಡಿದ ಮೊದಲ ಸ್ಲೀಪರ್ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆರಂಭಿಸಲಾಯಿತು. 55 ವರ್ಷಗಳ ಹಿಂದೆ 8 ವರ್ಷದವರಾಗಿದ್ದ ನಿಖಿಲ್ ತಿವಾರಿ ತಮ್ಮ ಅಪ್ಪನೊಂದಿಗೆ ಮೊದಲ ಸ್ಲೀಪರ್ ಬಸ್​ನಲ್ಲಿ ಪ್ರಯಾಣ ಮಾಡಿದ್ದನ್ನು ಉಲ್ಲೇಖಿಸಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಅವರು ಅಂದಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾವು ಆ ದೊಡ್ಡ ಬಸ್​ ಹತ್ತಿದಾಗ ಬಹಳ ಆಶ್ಚರ್ಯವಾಗಿತ್ತು. ಇನ್ನೂ ನನಗೆ ನೆನಪಿದೆ, ಆ ಬಸ್​ನ ಸಿಬ್ಬಂದಿ ಬೆಡ್​ ದಿಂಬು, ಲೈಟ್ ಮತ್ತು ರೇಡಿಯೋ ವ್ಯವಸ್ಥೆ ಮಾಡಿದ್ದರು. ಆ ಬಸ್​ನ ಫೋಟೋ, ವಿಡಿಯೋವನ್ನು ನನ್ನ ತಂದೆ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು ಎಂದು ನಿಖಿಲ್ ತಿವಾರಿ 55 ವರ್ಷ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ವರದಿಯು ಅವರ ಹೇಳಿಕೆ ಉಲ್ಲೇಖಿಸಿದೆ.
ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​ಟಿಸಿ)ಯ ಮಹತ್ವದ ಯೋಜನೆಯಾದ ಸ್ಲೀಪರ್ ಬಸ್ ಬಹಳ ಯಶಸ್ವಿಯಾಯಿತು. ಈ ಸ್ಲೀಪರ್ ಬಸ್​ನ ಬಗ್ಗೆ ತಿಳಿದುಕೊಳ್ಳಲು, ಅಧ್ಯಯನ ಮಾಡಲು ಕಣ್ಣಪ್ಪ ಎಂಬ ಸಿಬ್ಬಂದಿಯನ್ನು ಎಂಎಸ್​ಆರ್​ಟಿಸಿಯಿಂದ ಜರ್ಮನಿಗೆ ಕಳುಹಿಸಲಾಗಿತ್ತು. ಅಲ್ಲಿನ ಬಸ್​ಗಳ ಸಂಚಾರ, ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದು ಕರ್ನಾಟಕದಲ್ಲೂ ಅಳವಡಿಸಲಾಯಿತು. ಇದಕ್ಕಾಗಿ ವಿಶೇಷವಾಗಿ ತರಬೇತಿ ಪಡೆದ ಚಾಲಕರು, ಕಂಡಕ್ಟರ್ ಅನ್ನು ನೇಮಕ ಮಾಡಲಾಗಿತ್ತು. ಅದಾದ ಬಳಿಕ ಹಲವು ಬದಲಾವಣೆಗಳೊಂದಿಗೆ ಸ್ಲೀಪರ್ ಬಸ್ ಅನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದೀಗ ರಾಜ್ಯಾದ್ಯಂತ ಸಾಕಷ್ಟು ಸ್ಲೀಪರ್ ಬಸ್​ಗಳು ಓಡಾಡುತ್ತಿವೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement