
ಮಂಗಳೂರು: ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭವತಿ ಮಾಡಿದ್ದ ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್.ಪಿ. ರಿಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿರುವುದಾಗಿ ಕಡಬ ಠಾಣೆ ಪೊಲೀಸ್ ಪೇದೆ ಶಿವರಾಜ್ ವಿರುದ್ಧ ಸಂತ್ರಸ್ತೆ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ, ಪೊಲೀಸ್ ಪೇದೆ ಶಿವರಾಜ್ ನನ್ನು ಬಂಧಿಸಿದ್ದಾರೆ. ಹಾಗೂ
ಸಂತ್ರಸ್ತ ಅಪ್ರಾಪ್ತೆ ಹಾಗೂ ಆಕೆಯ ತಾಯಿ ಕೂಡ ಪತ್ತೆಯಾಗಿದ್ದಾರೆ ಎಂದು ಎಸ್.ಪಿ ರಿಷಿಕೇಶ್ ಮಾಹಿತಿ ನೀಡಿದ್ದಾರೆ.
ಪ್ರಾಪ್ತೆ ಎರಡು ವರ್ಷಗಳ ಹಿಂದೆ ಕಡಬ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ನಂತರ, ಪೋಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಜೊತೆ ಸಂವಹನ ನಡೆಸುತ್ತಿದ್ದರು. ಸಮನ್ಸ್ ನೀಡುವ ನೆಪದಲ್ಲಿ ಪೊಲೀಸ್ ಪೇದೆ ಸಂತ್ರಸ್ತೆ ಮನೆಗೆ ಭೇಟಿ ನೀಡುತ್ತಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಗರ್ಭಿಣಿಯಾದಾಗ, ಆಕೆಯ ಪೋಷಕರು ಈ ಬಗ್ಗೆ ತಿಳಿದು ಆರೋಪಿಯನ್ನು ವಿಚಾರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬಾಲಕಿಯನ್ನು ಮದುವೆಯಾಗಲು ಆರೋಪಿಗಳು ನಿರಾಕರಿಸಿದ. ಅವನು ಅವಳ ಹೆತ್ತವರಿಗೆ ಗರ್ಭಪಾತ ಮಾಡಿಸಲು ಹೇಳಿದನು ಮತ್ತು ಅದಕ್ಕಾಗಿ ಹಣವನ್ನು ಕೊಡುತ್ತೇನೆಂದು ಹೇಳಿದ್ದ. ಹುಡುಗಿ ಮತ್ತು ಆಕೆಯ ತಾಯಿ ಸೆಪ್ಟೆಂಬರ್ 18 ರಿಂದ ಕಾಣೆಯಾಗಿದ್ದಾರೆ ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿತ್ತು.



ನಿಮ್ಮ ಕಾಮೆಂಟ್ ಬರೆಯಿರಿ