ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಹಿಂದೂ ವಿರೋಧಿ ಪ್ರಚಾರದ ಆರೋಪ

ಕಾನ್ಪುರ: ಉತ್ತರ ಪ್ರದೇಶದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್ ಅವಸ್ಥಿ ಈ ಆರೋಪಗಳನ್ನು ಮಾಡಿದ್ದಾರೆ.
ಮೊಹಮ್ಮದ್ ಇಫ್ತಿಖರುದ್ದೀನ್ ಪ್ರಸ್ತುತ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವಸ್ಥಿ ಅಂದಿನ ಕಾನ್ಪುರ ವಲಯ ಆಯುಕ್ತ ಮೊಹಮ್ಮದ್ ಇಫ್ತಿಖರುದ್ದೀನ್ ಅವರದ್ದು ಎನ್ನಲಾದ ಧಾರ್ಮಿಕ ಕಾರ್ಯಕ್ರಮಗಳ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೊಗಳಲ್ಲಿ ಇಫ್ತಿಖರುದ್ದೀನ್ ಇಸ್ಲಾಂ ಅನ್ನು ಧರ್ಮವಾಗಿ ಸ್ವೀಕರಿಸುವ ಪ್ರಯೋಜನಗಳನ್ನು ಜನರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೇಳಲಾದ ವೀಡಿಯೊಗಳಲ್ಲಿ ಐಎಎಸ್ ಅಧಿಕಾರಿಯ ಪಕ್ಕದಲ್ಲಿ ಧಾರ್ಮಿಕ ಮುಖಂಡರು ಕುಳಿತಿರುವುದು ಕೂಡ ಕಾಣಿಸುತ್ತದೆ.
ಇನ್ನೊಂದು ವಿಡಿಯೋದಲ್ಲಿ, ಐಎಎಸ್ ಇಫ್ತಿಖರುದ್ದೀನ್ ಅವರು ಮುಸ್ಲಿಂ ಭಾಷಣಕಾರರು ತಮ್ಮ ಅಧಿಕೃತ ನಿವಾಸದಲ್ಲಿ ಆಮೂಲಾಗ್ರ ಪಾಠಗಳನ್ನು ಹೇಳುತ್ತಿರುವಾಗ ನೆಲದ ಮೇಲೆ ಕುಳಿತಿರುವುದು ಕಂಡುಬರುತ್ತದೆ. ವಿಡಿಯೋ ಹೊರಬಂದ ನಂತರ, ಕಾನ್ಪುರ ಪೊಲೀಸ್ ಆಯುಕ್ತ ಅಸಿಮ್ ಕುಮಾರ್ ಅರುಣ್ ಸಂಪೂರ್ಣ ವಿಷಯವನ್ನು ತನಿಖೆ ಮಾಡುವ ಜವಾಬ್ದಾರಿಯನ್ನು ಹೆಚ್ಚುವರಿ ಡಿಸಿಪಿ (ಪೂರ್ವ) ಸೋಮೇಂದ್ರ ಮೀನಾ ಅವರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾನ್ಪುರ್ ಆಯುಕ್ತರ ನಿವಾಸದಲ್ಲಿ ತೆಗೆದ ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ಅವರ ವೈರಲ್ ವಿಡಿಯೋ ತನಿಖೆಯನ್ನು ಕಾನ್ಪುರ ನಗರದ , ಪೊಲೀಸ್ ಕಮಿಷನರೇಟ್ ಎಡಿಪಿ ಈಸ್ಟ್ ಅವರಿಗೆ ವಹಿಸಲಾಗಿದೆ. ವಿಡಿಯೋ ಅಧಿಕೃತವಾಗಿದೆಯೇ ಮತ್ತು ಅದರಲ್ಲಿ ಯಾವುದೇ ಮಾರ್ಫಿಂಗ್‌ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ” ಎಂದು ಕಾನ್ಪುರ ನಗರದ ಕಮೀಷನರೇಟ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಕೇಳಿದಾಗ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, “ಇದು ಗಂಭೀರವಾದ ವಿಷಯ. ಈ ರೀತಿಯ ಏನಾದರೂ ಇದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಒಳ್ಳೆಯ ಸುದ್ದಿ...| ಈ ವರ್ಷ ವಾಡಿಕೆಗಿಂತ ಮೊದಲೇ ಆಗಮಿಸಲಿದೆ ಮುಂಗಾರು ಮಳೆ...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement