ಉರಿ ಸೆಕ್ಟರ್​​ನಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲ: ಓರ್ವ ಪಾಕ್ ಉಗ್ರನ ಹತ್ಯೆ, ಮತ್ತೊಬ್ಬನ ಸೆರೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಸೋಮವಾರ ರಾತ್ರಿ (Line of Control) ಸೇನೆಯು ಭಯೋತ್ಪಾದಕರು ಒಳನುಸುಳುವುದನ್ನು ವಿಫಲಗೊಳಿಸಿದೆ.
ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಉಗ್ರನನ್ನು ಸೇನಾಪಡೆ ಹತ್ಯೆ ಮಾಡಿದ್ದು ಇನ್ನೊಬ್ಬನನ್ನು ಸೆರೆಹಿಡಿಯಲಾಗಿದೆ. ಈ ವೇಳೆ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನುಮಾನಾಸ್ಪದ ಚಲನೆಯನ್ನು ಗಮನಿಸಿದ ನಂತರ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯು ಶನಿವಾರ ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆ ಆರಂಭಿಸಿತ್ತು ಎಂದು ಸೇನೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ನುಸುಳುಕೋರರನ್ನು ಸೈನಿಕರು ತಡೆದಾಗ ಗುಂಡಿನ ಕಾಳಗ ನಡೆದಿದೆ. ಎರಡು ಕಡೆಯವರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಸತ್ತಿದ್ದಾನೆ, ಇನ್ನೊಬ್ಬ ಸೆರೆ ಸಿಕ್ಕಿದ್ದಾನೆ, ಈ ವೇಳೆ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ಉರಿ ವಲಯದ ನಿಯಂತ್ರಣ ರೇಖೆಯಲ್ಲಿ ಸೇನೆಯು ವಿಫಲಗೊಳಿಸಿದ ಮೂರನೇ ಒಳನುಸುಳುವಿಕೆ ಪ್ರಯತ್ನ ಇದಾಗಿದೆ.
ಕಳೆದ ವಾರ ಉರಿ ನಿಯಂತ್ರಣ ರೇಖೆ ಬಳಿ ಹತ್ಲಾಂಗ ಗ್ರಾಮದಲ್ಲಿ ಸೇನೆಯು ಮೂವರು ನುಸುಳುಕೋರರನ್ನು ಹತ್ಯೆ ಮಾಡಿದೆ. ಐವರು ನುಸುಳುಕೋರರು ಒಳನುಸುಳಲು ಯತ್ನಿಸಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದರು. ಅವರಿಂದ 69 ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸೇನೆ ಹೇಳಿದೆ.

ಪ್ರಮುಖ ಸುದ್ದಿ :-   ಮೋದಿ, ಆರ್‌ಎಸ್‌ಎಸ್‌ ನ 'ಅವಹೇಳನಕಾರಿ' ವ್ಯಂಗ್ಯಚಿತ್ರ : ಕಾರ್ಟೂನಿಸ್ಟ್‌ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement