ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ: ಇಬ್ಬರು ಮಕ್ಕಳು ಬಚಾವ್‌

ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಮೂವರು ಮಕ್ಕಳ ಜತೆ ಮಲಪ್ರಭಾ ನದಿಗೆ ಹಾರಿದ್ದು,  ಇಬ್ಬರು ಮಕ್ಕಳು ತಾಯಿ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
ಸಾಮೂಹಿಕ ಆತ್ಮಹತ್ಯೆ ಪ್ರಯತ್ನದಲ್ಲಿ  ತಾಯಿ ಉಮಾದೇವಿ(45) ಮೂರು ಮಕ್ಕಳ ಸಮೇತ ಸಾಯಲು ಬಂದ ತಾಯಿ, ಚಿಕ್ಕ ಮಗಳನ್ನು ( 8) ತಬ್ಬಿಕೊಂಡೇ ನದಿಗೆ ಹಾರಿದ ಹೃದಯವಿದ್ರಾವಕ ಘಟನೆ ಬುಧವಾರ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಸಂಭವಿಸಿದೆ. ಈ ವೇಳೆ ಸಾವಿಗೆ ಹೆದರಿದ ಮತ್ತಿಬ್ಬರು ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಓಡಿ ಬಚಾವ್ ಆಗಿದ್ದಾರೆ..ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದಾರೆ.
ಉಮಾದೇವಿ ಕುಟುಂಬ ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. 3 ತಿಂಗಳ ಹಿಂದೆ ಕೊವಿಡ್‌ನಿಂದ ಉಮಾದೇವಿ ಪತಿ, ಹೈಸ್ಕೂಲ್ ಶಿಕ್ಷಕ ಸಂಗಮೇಶ ಚಲ್ಲಿಕೇರಿ ಮೃತಪಟ್ಟಿದ್ದರು. ಇದರಿಂದ ಬೇಸತ್ತು ಮಕ್ಕಳ ಜತೆ ತಾಯಿಯೂ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಪಾರಾಗಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಥಳಕ್ಕೆ ದೌಡಾಯಿಸಿದ ರೋಣ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ತಾಯಿ, ಮಗುವಿಗೆ ಶೋಧ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಇಂದಿನಿಂದ (ಮೇ19) 5 ದಿನ ಧಾರಾಕಾರ ಮಳೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement