ನಮ್ಮ ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ..!

ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಗಳಷ್ಟು ಮಣ್ಣು ಕುಸಿದಿರುವ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಗೊಟ್ಟಿಗೆರೆಯಿಂದ ನಾಗವಾರದ ವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಟಿವಿಎಂ ಮೆಶಿನ್‌ ಊರ್ಜಾ ಸುರಂಗ ಕೊರೆದಿತ್ತು. ಆದ್ರೆ ಈಗ ಮೆಟ್ರೋ ಕಾಮಗಾರಿಯಿಂದಾಗಿ ಟ್ಯಾನರಿ ರಸ್ತೆಯಲ್ಲಿ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಯಷ್ಟು ಮಣ್ಣು ಕುಸಿದಿದೆ. ಅದೃಷ್ಟವಶಾತ್‌ ಸ್ಥಳದಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಮೆಟ್ರೋ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟ್ಯಾನರಿ ರಸ್ತೆಯಲ್ಲಿರುವ ಬಾವಿಯ ಜಾಗದ ಮಾಲೀಕ ಝುಬಿ ಎಂಬವರು ಕಳೆದ ಕೆಲವು ವರ್ಷದ ಹಿಂದೆ ಮಣ್ಣು ಹಾಕಿ ಬಾವಿಯನ್ನು ಮುಚ್ಚಿದ್ದರು. ಆದರೆ ಬಿಎಂಆರ್‌ಸಿಎಲ್‌ ಕಾಮಗಾರಿಯಿಂದಾಗಿ ಬಾವಿಗೆ ಮುಚ್ಚಿದ್ದ ಮಣ್ಣು ಕುಸಿತವಾಗಿದೆ. ಅಲ್ಲದೇ ಸುತ್ತಮುತ್ತಲ ಜಾಗದಲ್ಲಿರುವ ಕಟ್ಟಡಗಳು ಕುಸಿತದ ಭೀತಿ ಎದುರಾಗಿದೆ. ಮುಂಜಾನೆ 3 ಗಂಟೆಗೆ ಮಣ್ಣು ಕುಸಿದಿದೆ ಎಂದು ಹೇಳಲಾಗಿದೆ. ಮಣ್ಣು ಕುಸಿಯಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣವೆಂದು ಆರೋಪಿಸಿರುವ ಜಾಗ ಮಾಲೀಕರು ಇದಕ್ಕೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ನಡೆಸಬೇಕಾಗಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಮೆಟ್ರೋ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement