ವಿದ್ಯಾರ್ಥಿಗಳಿಗೆ ಬಸ್‌ಪಾಸ್‌: ಸೇವಾ-ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಎನ್‌ಡಬ್ಲ್ಯೂಕೆಆರ್ಟಿಸಿ ಎಂಡಿ ಸೂಚನೆ

ಎನ್‌ಡಬ್ಲ್ಯೂಕೆಆರ್ಟಿಸಿ ಎಂಡಿ ಗುರುದತ್ತ ಹೆಗಡೆ

ಹುಬ್ಬಳ್ಳಿ: ಶಾಲಾ ಕಾಲೇಜುಗಳು ಹಂತ, ಹಂತವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿದಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ವಿತರಿಸುತ್ತಿದೆ. ಈ ಕುರಿತು ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದ್ದು, ಸೇವಾ ಸಿಂಧು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಪಾಸ್ ಕೌಂಟರ್‌ಗಳಿಂದ ಬಸ್ ಪಾಸ್ ಪಡೆಯಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಿಯಾಯಿತಿ ಬಸ್ ಪಾಸ್ ಪಡೆಯುವ ಕುರಿತು ಸೆಪ್ಟಂಬರ್ ತಿಂಗಳ ಆರಂಭದಿಂದಲೂ ಶಾಲಾ ಕಾಲೇಜಗಳ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2020-21ನೇ ಸಾಲಿನಲ್ಲಿ ಬಸ್ ಪಾಸ್ ಪಡೆದ ಹಾಗೂ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಪ್ರವೇಶಾತಿ ಪಡೆದ ದಾಖಲಾತಿಯನ್ನು ತೋರ‍್ಪಡಿಸಿ ಸಂಸ್ಥೆಯ ನಗರ/ಹೊರವಲಯ/ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಸೆಪ್ಟೆಂಬರ್‌ 01-09-2021 ರಿಂದ ದಿಃ 25-09-2021ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.
2020-21ನೇ ಸಾಲಿನಲ್ಲಿ ಪ್ರವೇಶ ಪಡೆದು ತರಗತಿ/ಪರೀಕ್ಷೆಗಳು ಬಾಕಿ ಇರುವ ಎಲ್ಲಾ ವಗ೯ದ ಪದವಿ /ಡಿಪ್ಲೋಮಾ/ ಐ.ಟಿ.ಐ/ ಸಂಜೆಕಾಲೇಜು/ ಸ್ನಾತಕೋತ್ತರ/ ವೃತ್ತಿಪರ ತರಗತಿಗಳ ವಿದ್ಯಾಥಿ೯ಗಳಿಗೆ ಪರೀಕ್ಷಾ ದಿನಾಂಕಕ್ಕೆ ಅಂತ್ಯಗೊಳ್ಳುವಂತೆ ಗರಿಷ್ಠ ನವಂಬರ್-2021ರ ವರೆಗೆ ಸಂಸ್ಥೆಗೆ ಸಂಬಂಧಪಟ್ಟ ಪಾಸ್ ಕೌಂಟರ್‌ಗಳಿಂದ ಸಹಿ ಹಾಗೂ ಮೊಹರು ಪಡೆದುಕೊಂಡು ಉಚಿತವಾಗಿ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಸಹ ಪ್ರಸಕ್ತ ವರ್ಷದ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಉಚಿತ ಪ್ರಯಾಣದ ಅವಧಿಯನ್ನು ವಿಸ್ತರಿಸುವಂತೆ ಕೆಲವು ಬಸ್ ನಿಲ್ದಾಣಗಳಲ್ಲಿ ಸಂಸ್ಥೆಯ ಬಸ್ ಕಾರ್ಯಾಚರಣೆಗೆ ಅಡಚಣೆ ಹಾಗೂ ಪ್ರತಿಭಟನೆಯನ್ನು ಮಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ 2021-22ನೇ ಸಾಲಿಗೆ ಅಗತ್ಯವಾದ ಬಸ್ ಪಾಸ್‌ ಗಳು ಲಭ್ಯವಿದೆ. ದಿನಾಂಕ 01-09-2021 ರಿಂದ ವಿದ್ಯಾಥಿ೯ಗಳ ಬಸ್ ಪಾಸ್ ವಿತರಣೆಯ ಕಾರ್ಯ ಪ್ರಗತಿಯಲ್ಲಿದ್ದು ದಿನಾಂಕ 01-09-2021 ರಿಂದ ದಿನಾಂಕ 25-09-2021ರ ವರೆಗೆ 95179 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
26-09-2021 ರಿಂದ 29-09-2021ರ ವರೆಗೆ ಕೇವಲ ನಾಲ್ಕು ದಿನಗಳಲ್ಲಿ 54769 ವಿದ್ಯಾರ್ಥಿಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಬಸ್‌ ಪಾಸಿಗೆ ಅರ್ಜಿ ಸಲ್ಲಿಕೆಯ ಪ್ರಮಾಣ ಹೆಚ್ಚಳವಾಗಿರುವುದರಿಂದ ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ಸಿಬ್ಬಂದಿ ನಿಯೋಜಿಸಿ ಬಸ್ ಪಾಸ್ ವಿತರಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ
ಆದ್ದರಿಂದ ಪ್ರಸಕ್ತ ವರ್ಷದಲ್ಲಿ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಈ ಕೂಡಲೇ ಸೇವಾಸಿಂಧು ಆನಲೈನ್ ಪೋರ್ಟಲ್‌ ಮೂಲಕ ಅಜಿ೯ ಸಲ್ಲಿಸಿ ಸಂಬಂಧಪಟ್ಟ ಸಂಸ್ಥೆಯ ಪಾಸ್ ಕೌಂಟರ್‌ಗಳಿಂದ ಬಸ್ ಪಾಸ್ ಪಡೆದುಕೊಳ್ಳಲು ಹಾಗೂ ಸಂಸ್ಥೆಯ ಜೊತೆಗೆ ಸಹಕರಿಸಲು ಎಲ್ಲ ವಿದ್ಯಾಥಿ೯ಗಳಿಗೆ, ವಿದ್ಯಾಥಿ೯ ಸಂಘಟನೆ, ಶಾಲಾ-ಕಾಲೇಜು ಆಡಳಿತ ಮಂಡಳಿಗಳಿಗೆ ಕೋರಿದ್ದಾರೆ ಹಾಗೂ ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಾಕರಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement