ಹುಬ್ಬಳ್ಳಿ: ಹುಬ್ಬಳ್ಳಿಯ ಗುಡಿಸಾಗರ, ಬೂದನಗುಡ್ಡ, ಅಂಚಟಗೇರಿ ಸೇರಿದಂತೆ ಇತರ ಭಾಗದಲ್ಲಿ ಇಲ್ಲಿಯವರೆಗೆ ಮತ್ತು ನಿನ್ನೆ ದಿನ ಸಹ ಚಿರತೆ ಕಂಡುಬಂದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿಲ್ಲ ಎಂದು ಡಿಎಫ್‌ಒ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.
ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆ ಭಾಗದಲ್ಲಿ ನಿರಂತರ ಪರಿಶೀಲನೆ, ಗಸ್ತು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾಡು ಪ್ರಾಣಿ, ಚಿರತೆ ದಾಳಿ ಕುರಿತು ಬೇರೆ ಕೆಲವರು ರಾಜ್ಯ ಹಾಗೂ ಪ್ರದೇಶಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಭಯಭೀತರಾಗುತ್ತಾರೆ. ಆದ್ದರಿಂದ ಯಾರು ಸಹ ಇಂತಹ ಫೇಕ್ (ಸುಳ್ಳು) ಸಂದೇಶಗಳನ್ನು ಇತರರಿಗೆ ಕಳುಹಿಸುವ, ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭಯ ಮೂಡಿಸಬಾರದು ಎಂದು ಡಿಎಫ್‌ಒ ಕ್ಷೀರಸಾಗರ ಮನವಿ ಮಾಡಿದ್ದಾರೆ.
ಇಂತಹ ಫೇಕ್ (ಸುಳ್ಳು) ಸಂದೇಶಗಳನ್ನು ಸಾರ್ವಜನಿಜನಿಕರು ನಂಬದಂತೆ ಮತ್ತು ಇತರರಿಗೆ ಫಾರ್ವಡ್ ಮಾಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯ ಗಿರಿಯಾಲ, ಕಟನೂರ, ಗುಡಿಸಾಗರ, ಅಂಚಟಗೇರಿ, ಬೂದನಗುಡ್ಡ ಸೇರಿದಂತೆ ಆ ಭಾಗದ ಸುಮಾರು 1400 ಹೆಕ್ಟೇರ್ ಭೂಮಿಯಲ್ಲಿ ರಕ್ಷಿತ ಅರಣ್ಯ (ಯಲ್ಲಾಪುರ, ಶಿರಸಿ ಭಾಗಕ್ಕೆ ಹೊಂದಿಕೊಂಡಂತೆ) ಪ್ರದೇಶವಿದೆ. ಚಿರತೆ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಈ ರಕ್ಷಿತ ಅರಣ್ಯದಲ್ಲಿ ಇರುವುದು ಸಹಜ. ಹೀಗಾಗಿ ಇಂಥ ಫೇಕ್ ಸಂದೇಶಗಳನ್ನು ನೋಡಿ ಗಾಬರಿಯಾಗುವುದು ಬೇಡ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ