ಭೂಕುಸಿತ: ಶಿಮ್ಲಾದಲ್ಲಿ ಕುಸಿದುಬಿದ್ದ ಎಂಟು ಮಹಡಿ ಕಟ್ಟಡ.. ವಿಡಿಯೊ ವೈರಲ್

ಶಿಮ್ಲಾ: ಶಿಮ್ಲಾದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಬಹುಮಹಡಿ ಕಟ್ಟಡವೊಂದು ಕುಸಿದಿದೆ.
ಗುರುವಾರ ಸಂಜೆ 5.45 ಕ್ಕೆ ಶಿಮ್ಲಾದ ಹಾಲಿ ಪ್ಯಾಲೇಸ್ ಬಳಿಯ ಘೋಡಾ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಂಟು ಅಂತಸ್ತಿನ ಕಟ್ಟಡದ ಭಾಗಗಳು ಎರಡು ಎರಡು ಅಂತಸ್ತಿನ ಕಟ್ಟಡಗಳಿಗೆ ತಗುಲಿ ಹಾನಿ ಮಾಡಿದೆ. ಹೋಟೆಲ್ ಸೇರಿದಂತೆ ಎರಡು ಪಕ್ಕದ ಕಟ್ಟಡಗಳು ಕೂಡ ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲಾಡಳಿತವು ಕಟ್ಟಡಗಳ ಪ್ರತಿ ನಿವಾಸಿಗಳಿಗೆ ತಕ್ಷಣದ ಹಣಕಾಸಿನ ಸಹಾಯವಾಗಿ 10,000 ರೂಗಳನ್ನು ಒದಗಿಸಿದೆ ಎಂದು ಮೊಖ್ತಾ ಹೇಳಿದ್ದಾರೆ.

ಆದಾಗ್ಯೂ, ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರದಿಂದ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಭಾರದ್ವಾಜ್ ಹೇಳಿರುವುದಾಗಿ ವರದಿಯಾಗಿದೆ.
ಕಿನ್ನೌರ್ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಹಲವಾರು ಭೂಕುಸಿತದಿಂದಾಗಿ, ಕಿನ್ನೌರ್ ಜಿಲ್ಲೆಯ ಪುವಾರಿಯಿಂದ ಕಾಜಾದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಹಿರಿಯ ಅಧಿಕಾರಿಯ ಪ್ರಕಾರ ಬಿಲಾಸ್ಪುರದ ನೈನಾ ದೇವಿಯಲ್ಲಿ 180.6 ಮಿಮೀ ಮಳೆಯಾಗಿದ್ದು, ಸೋಲಾನ್‌ನಲ್ಲಿ ಕಂದಘಾಟ್ 65.2 ಮಿಮೀ ಮಳೆಯಾಗಿದೆ. ಶಿಮ್ಲಾದಲ್ಲಿ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 54.6 ಮಿ.ಮೀ. ಮಳೆಯಾಗಿದೆ.
2021 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ 432 ಜನ ಮೃತಪಟ್ಟಿದ್ದಾರೆ, ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು. ಈ ವರ್ಷದ ಮಳೆಗಾಲದಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಭೂಕುಸಿತಗಳು ಸಂಭವಿಸಿವೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement