ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಲೋಕಜನ ಶಕ್ತಿ ಪಕ್ಷದ ಸಂಸ್ಥಾಪಕ ರಾಮವಿಲಾಸ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿ ಪರಾಸ್ ನಡುವಿನ ರಾಜಕೀಯ ದ್ವೇಷದಿಂದಾಗಿ ಈ ತಿಂಗಳ ಕೊನೆಯಲ್ಲಿ ಬಿಹಾರದ ಎರಡು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮೊದಲು ಚುನಾವಣಾ ಆಯೋಗವು ಲೋಕ ಜನಶಕ್ತಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಿದೆ.
ಅಕ್ಟೋಬರ್ 30 ರಂದು ಕುಶೇಶ್ವರ ಆಸ್ಥಾನ್ ಹಾಗೂ ತಾರಾಪುರ ಕ್ಷೇತ್ರಗಳ ಉಪಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗವು ಈ ಕ್ರಮ ತೆಗೆದುಕೊಂಡಿದೆ. ಎರಡು ಗುಂಪಿನವರು ಚಿಹ್ನೆ ಪಡೆಯಲು ಹಕ್ಕು ಸ್ಥಾಪಿದ್ದವು. ಈಗ ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸಿದ್ದು, ಯಾರಿಗೆ ಪಕ್ಷದ ಹೆಚ್ಚಿನ ಸದಸ್ಯರ ಬೆಂಬಲವಿದೆ ಎಂದು ನಿರ್ಧರಿಸುವ ತನಕ ಯಾವುದನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷ ಎಂದು ಗುರುತಿಸಲಾಗುವುದಿಲ್ಲ. ಎಂದು ಹೇಳಿದೆ, ಅಲ್ಲದೆ, ಆಯೋಗದ ನಿರ್ಧಾರವು ಅಂತಹ ಎಲ್ಲಾ ಪ್ರತಿಸ್ಪರ್ಧಿ ವಿಭಾಗಗಳ ಮೇಲೆ ಬದ್ಧವಾಗಿರುತ್ತದೆ ಎಂದು ತಿಳಿಸಿದೆ.
ಪಾಸ್ವಾನ್ ಹಾಗೂ ಪರಾಸ್ ಅವರಿಗೆ ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಉಪಚುನಾವಣೆಗೆ ಪ್ರತ್ಯೇಕ ಹೆಸರು ಹಾಗೂ ಚಿಹ್ನೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಹಾಗೂ ಮುಂದಿನ ಕ್ರಮವಾಗುವ ವರೆಗೂ ಚಿಹ್ನೆಯನ್ನು ಯಾರೂ ಬಳಸದಂತೆ ಅಮಾನತುಗೊಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ