ಅ.11ರಿಂದ ಕನ್ನಡ-ಹಿಂದಿಯಲ್ಲೂ ಪ್ರಸಾರವಾಗಲಿದೆ ತಿರುಪತಿ ಚಾನೆಲ್

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ ನಿರ್ವಹಿಸುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಮುಂದೆ ಕನ್ನಡದಲ್ಲಿಯೂ ಪ್ರಸಾರವಾಗಲಿದೆ.
ಅಕ್ಟೋಬರ್ 11ರಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಪ್ರಸಾರವಾಗಲಿದೆ. ಬ್ರಹ್ಮೋತ್ಸವದ ಗರುಡ ಸೇವೆ ಆಚರಣೆ ವೇಳೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಾಹಿನಿಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಆಹ್ವಾನ ನೀಡಿದೆ. ಇಲ್ಲಿನ ತಿರುಮಲದಲ್ಲಿರುವ ವೆಂಕಟೇಶ್ವರ ದೇವರ ಗುಡಿಯಲ್ಲಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವದ ” ಗರುಡಸೇವಾ ” ಹಬ್ಬದ ಶುಭ ಸಂದರ್ಭದಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ 24 ಗಂಟೆಯ ತೆಲುಗಿನ ವಾಹಿನಿಯನ್ನು ಉದ್ಘಾಟಿಸಿದ್ದರು. ದಶಕದ ಬಳಿಕ ತಮಿಳಿನಲ್ಲೂ ಪ್ರಸಾರ ಮಾಡಿತ್ತು.
ಮುಂದೆ, ಅಕ್ಟೋಬರ್ 7 ರಂದು ಆರಂಭವಾಗಲಿರುವ ತಿರುಪತಿ ಭಗವಾನ್ ಬಾಲಾಜಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವವನ್ನು ಭಕ್ತರ ಭಾಗವಹಿಸುವಿಕೆ ಇಲ್ಲದೆ ನಡೆಸಲಾಗುವುದು, ನಿರೀಕ್ಷಿತ ಕೋವಿಡ್ -19 ಮೂರನೇ ಅಲೆಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement