ಆಗಸ್ಟ್‌ ತಿಂಗಳಲ್ಲೇ ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ನಿಷೇಧಿಸಿದ ವಾಟ್ಸಾಪ್‌..!

ನವದೆಹಲಿ: ‌ಹೊಸ ಐಟಿ ನಿಯಮ ಜಾರಿಯಾದ ಬೆನ್ನಲ್ಲೇ ಭಾರತೀಯರ 20 ಲಕ್ಷ ಫೋನ್ ನಂಬರ್ ಗಳನ್ನು ವಾಟ್ಸಾಪ್‌ ನಿಷೇಧಿಸಿದೆ. ಸುಳ್ಳು ಸುದ್ದಿ, ನಕಲಿ ವಿಡಿಯೋ ಗಳನ್ನು ಹರಿಬಿಟ್ಟಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಗೊಳಿಸಲಾಗಿದೆ. ಆ ಬಳಿಕ ದೇಶದಲ್ಲಿರುವ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಂಜಿಂಗ್‌ ಆಪ್ಲಿಕೇಷನ್‌ಗಳು ಸರಕಾರಕ್ಕೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.
ವಾಟ್ಸಾಪ್‌ ಕಂಪೆನಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಆಗಸ್ಟ್‌ ತಿಂಗಳೊಂದರಲ್ಲೇ 20,70,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಕಂಪನಿ ಹೇಳಿದೆ.
ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ಅದು ಹೇಳಿದೆ. ಹಿಂದೆ, ಫೇಸ್‌ಬುಕ್ ಒಡೆತನದ ಕಂಪನಿಯು ಶೇಕಡಾ 95 ಕ್ಕಿಂತ ಹೆಚ್ಚು ನಿಷೇಧಗಳು ಅನಧಿಕೃತವಾಗಿ ಸ್ವಯಂಚಾಲಿತ ಅಥವಾ ಬಲ್ಕ್ ಮೆಸೇಜಿಂಗ್ (ಸ್ಪ್ಯಾಮ್) ಬಳಕೆಯಿಂದಾಗಿ ಎಂದು ಹೇಳಿತ್ತು.
ಹೊಸ ಐಟಿ ನಿಯಮದ ಪ್ರಕಾರ ನಕಲಿ ವಿಡಿಯೋ, ಸುಳ್ಳು ಸುದ್ದಿ ಪ್ರಸಾರ ಮಾಡುವುದು ಅಪರಾಧ. ಈ ಹಿನ್ನೆಲೆಯಲ್ಲೀಗ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿಯೇ ವಾಟ್ಸಾಸ್‌ ಈ ಕ್ರಮ ಕೈಗೊಂಡಿದೆ.
ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ಅದು ಹೇಳಿದೆ. ಹಿಂದೆ, ಫೇಸ್‌ಬುಕ್ ಒಡೆತನದ ಕಂಪನಿಯು ಶೇಕಡಾ 95 ಕ್ಕಿಂತ ಹೆಚ್ಚು ನಿಷೇಧಗಳು ಅನಧಿಕೃತವಾಗಿ ಸ್ವಯಂಚಾಲಿತ ಅಥವಾ ಬಲ್ಕ್ ಮೆಸೇಜಿಂಗ್ (ಸ್ಪ್ಯಾಮ್) ಬಳಕೆಯಿಂದಾಗಿ ಎಂದು ಹೇಳಿತ್ತು. ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ದುರುಪಯೋಗ ತಡೆಯಲು ಜಾಗತಿಕ ಸರಾಸರಿ ಖಾತೆಗಳು ತಿಂಗಳಿಗೆ ಸುಮಾರು 8 ಮಿಲಿಯನ್ ಖಾತೆಗಳನ್ನು ಹೊಂದಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement