ಕರ್ನಾಟಕದಲ್ಲಿ ಶನಿವಾರ 636 ಹೊಸ ಕೋವಿಡ್‌ ಸೋಂಕು ದೃಢ, 4 ಸಾವು

ಬೆಂಗಳೂರು:ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 636 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 4 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 745 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಈವರೆಗೆ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,77,225ಕ್ಕೆ ಏರಿಕೆಯಾಗಿದೆ ಹಾಗೂ ಚೇತರಿಸಿಕೊಂಡವರ ಸಂಖ್ಯೆ 29,27,029 ಕ್ಕೆ ಹೆಚ್ಚಳವಾಗಿದೆ. 12,356 ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,811ಕ್ಕೆ ಏರಿಕೆಯಾಗಿದೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬಾಗಲಕೋಟೆ , ಬೀದರ್, ಗದಗ, ಕಲಬುರಗಿ, ರಾಯಚೂರು , ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ.0.37 ಕ್ಕೆ ಇಳಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆಯಾಗಿದೆ .ಇಂದು 245 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 2 ಮಂದಿ ಮೃತಪಟ್ಡಿದ್ದಾರೆ 206 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ – 0, ಬಳ್ಳಾರಿ – 2, ಬೆಳಗಾವಿ -10, ಬೆಂಗಳೂರು ಗ್ರಾಮಾಂತರ- 8, ಬೆಂಗಳೂರು ನಗರ. – 245, ಬೀದರ್ -0, ಚಾಮರಾಜನಗರ – 6, ಚಿಕ್ಕಬಳ್ಳಾಪುರ –1,
ಚಿಕ್ಕಮಗಳೂರು- 20, ಚಿತ್ರದುರ್ಗ – 4, ದಕ್ಷಿಣ ಕನ್ನಡ -100, ದಾವಣಗೆರೆ -2, ಧಾರವಾಡ -3, ಗದಗ – 0, ಹಾಸನ – 44, ಹಾವೇರಿ – 1, ಕಲಬುರಗಿ- 0, ಕೊಡಗು – 28, ಕೋಲಾರ -7, ಕೊಪ್ಪಳ -3, ಮಂಡ್ಯ – 13, ಮೈಸೂರು -44, ರಾಯಚೂರು- 1, ರಾಮನಗರ -2, ಶಿವಮೊಗ್ಗ – 22, ತುಮಕೂರು -30, ಉಡುಪಿ – 25, ಉತ್ತರ ಕನ್ನಡ – 14, ವಿಜಯಪುರ – 1,ಯಾದಗಿರಿ- 0

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement