ಮೈಸೂರು: ವನ್ಯಜೀವಿ ಸಪ್ತಾಹದ ವಿಶೇಷ ದಿನದಂದೇ ಜರ್ಮನಿ, ಸಿಂಗಪುರ ಹಾಗೂ ಮಲೇಶಿಯಾದಿಂದ ಒಟ್ಟು ಆರು ಗೋರಿಲ್ಲಾಗಳು ಮೈಸೂರು ಮೃಗಾಲಯಕ್ಕೆ ಬಂದಿಳಿದಿವೆ.
ಜರ್ಮನಿಯಿಂದ ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಕೊಡುಗೆಯಾಗಿ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವ ಬಿಡಾರದ ವ್ಯವಸ್ಥೆಯನ್ನು ಇನ್ಫೋಸಿಸ್ ಮಾಡಿಕೊಟ್ಟಿದೆ.
ಮಲೇಶಿಯಾ ಹಾಗೂ ಸಿಂಗಪುರದಿಂದ ತಲಾ 2 ಒರಾಂಗುಟಾನ್ ಬಂದಿವೆ, ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪುರದಿಂದ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಒರಾಂಗುಟಾನುಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಅತಿ ಬುದ್ಧಿವಂತ ಹಾಗೂ ಅಪರೂಪದ ಒರಾಂಗುಟಾನ್ ಕೋತಿ ಪ್ರಭೇದಕ್ಕೆ ಸೇರಿದ ಪ್ರಾಣಿಯಾಗಿದ್ದು, ಮೃಗಾಲಯದಲ್ಲಿ ಆರೋಗ್ಯವಾಗಿವೆ. ಇವು ಕೂಡ ಚಿಂಪಾಂಜಿ, ಗೊರಿಲ್ಲಾ ಹೋಲುತ್ತವೆ. 15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳ ಆಗಮನವಾಗಿದೆ. ಕೋವಿಡ್ ಮುಂಜಾಗ್ರತೆ ದೃಷ್ಟಿಯಿಂದ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಶೀಘ್ರವೇ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ