ಲಸಿಕೆ ಪ್ರಮಾಣೀಕರಣದಲ್ಲಿ ಭಾರತದೊಂದಿಗೆ ತೊಡಗಿಸಿಕೊಳ್ಳುತ್ತೇವೆ: ಭಾರತದ ತಿರುಗೇಟಿನ ಕ್ರಮಕ್ಕೆ ಬ್ರಿಟನ್‌ ಪ್ರತಿಕ್ರಿಯೆ

ನವದೆಹಲಿ: ಬ್ರಿಟನ್ನಿನ “ತಾರತಮ್ಯ” ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಕ್ರಮಗಳನ್ನು ಹೇರಿದ ನಂತರ, ಬ್ರಿಟಿಷ್ ಹೈ ಕಮಿಷನ್ ಕೋವಿಡ್ -19 ಲಸಿಕೆ ಪ್ರಮಾಣೀಕರಣದ ಮಾನ್ಯತೆಯನ್ನು ವಿಸ್ತರಿಸಲು ದೇಶವು ನವದೆಹಲಿಯೊಂದಿಗೆ “ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದೆ.
ಭಾರತದಲ್ಲಿ ಸಂಬಂಧಿತ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಲಸಿಕೆ ಪಡೆದ ಜನರಿಗೆ ಲಸಿಕೆ ಪ್ರಮಾಣೀಕರಣದ ಬ್ರಿಟನ್ನಿನ ಮಾನ್ಯತೆ ವಿಸ್ತರಿಸಲು ನಾವು ಭಾರತ ಸರ್ಕಾರದೊಂದಿಗೆ ತಾಂತ್ರಿಕ ಸಹಕಾರವನ್ನು ಮುಂದುವರಿಸುತ್ತಿದ್ದೇವೆ” ಎಂದು ಬ್ರಿಟಿಷ್ ಹೈ ಕಮಿಷನ್‌ನ ವಕ್ತಾರರು ಎಎನ್‌ಐಗೆ ತಿಳಿಸಿದ್ದಾರೆ ,
ಭಾರತ ಸರ್ಕಾರ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಬ್ರಿಟನ್‌ನಿಂದ ದೇಶಕ್ಕೆ ಆಗಮಿಸುವ ಬ್ರಿಟನ್ನಿನ ಪ್ರಜೆಗಳು ತಮ್ಮ ಆಗಮನದ ನಂತರ 10 ದಿನಗಳವರೆಗೆ ಮನೆಯಲ್ಲಿ ಅಥವಾ ಗಮ್ಯಸ್ಥಾನ ವಿಳಾಸದಲ್ಲಿ ಕಡ್ಡಾಯವಾಗಿ ಸಂಪರ್ಕತಡೆ ಹೊಂದಿರಬೇಕು.
ಇದಲ್ಲದೆ, ಬ್ರಿಟನ್ನಿನಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು ಈಗ ಋಣಾತ್ಮಕ ಆರ್‌ಟಿ-ಪಿಸಿಆರ್ ವರದಿ ಹೊಂದಿರಬೇಕು ಮತ್ತು ಭಾರತಕ್ಕೆ ಬಂದ ನಂತರ 10 ದಿನಗಳ ಕಾಲ ಕಡ್ಡಾಯವಾಗಿ ಸಂಪರ್ಕತಡೆ ಹೊಂದಿರಬೇಕು ಎಂದು ಹೊಸ ಮಾರ್ಗಸೂಚಿ ಹೇಳುತ್ತದೆ.
ಹೊಸ ಪ್ರಯಾಣ ಮಾರ್ಗಸೂಚಿಗಳು ಅಕ್ಟೋಬರ್ 4ರಿಂದ ಜಾರಿಗೆ ಬರಲಿದ್ದು, ಯುಕೆಯಿಂದ ಬರುವ ಬ್ರಿಟನ್ನಿನ ಎಲ್ಲ ಪ್ರಜೆಗಳಿಗೆ ಇದು ಅನ್ವಯವಾಗುತ್ತದೆ.
ಟ್ರಾವೆಲ್ ರೋ ಎಂದರೇನು?
ಬ್ರಿಟನ್‌ ತನ್ನ ಪ್ರಯಾಣ ಮತ್ತು ಕ್ಯಾರೆಂಟೈನ್ ನಿಯಮಗಳಲ್ಲಿ ಬದಲಾವಣೆಗಳನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಘೋಷಿಸಿತು. ಅದರ ಹೊಸ ಅಂತಾರಾಷ್ಟ್ರೀಯ ಪ್ರಯಾಣದ ನಿಯಮಗಳು ಮೂಲಭೂತವಾಗಿ ಸಂಪೂರ್ಣವಾಗಿ ಲಸಿಕೆ ಹಾಕಿದ ಭಾರತೀಯರನ್ನು “ಲಸಿಕೆ ಹಾಕದವರು” ಎಂದು ಪರಿಗಣಿಸುತ್ತದೆ ಮತ್ತು ಅವರು ಬ್ರಿಟನ್ನಿನ ಬಂದ ಮೇಲೆ 10 ದಿನಗಳ ಕಾಲ ಕ್ವಾರಂಟೈನ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಅನುಮೋದಿತ ಲಸಿಕೆ ಪಟ್ಟಿಯಲ್ಲಿ ಭಾರತವು 18 ದೇಶಗಳಿಂದ ಹೊರಗುಳಿದಿದೆ, ಭಾರತೀಯರು “ಲಸಿಕೆ ಹಾಕದ” ಪ್ರಯಾಣಿಕರಿಗೆ ನಿಗದಿಪಡಿಸಿದ ನಿಯಮಗಳನ್ನೇ ಅನುಸರಿಸಬೇಕಿದೆ.
ಅಂದರೆ, ಕೋವಿಶೀಲ್ಡ್ ಈಗ ಬ್ರಿಟನ್ನಿನ ಅರ್ಹ ಲಸಿಕೆ ಸೂತ್ರೀಕರಣಗಳಲ್ಲಿ ಗುರುತಿಸಿಕೊಂಡಿದ್ದರೂ, ಬ್ರಿಟನ್‌ ಭೇಟಿ ಯೋಜಿಸುವ ಕೋವಿಶೀಲ್ಡ್-ಲಸಿಕೆ ಹಾಕಿದ ಭಾರತೀಯ ಪ್ರಯಾಣಿಕರಿಗೆ ಇದು ಯಾವುದೇ ಪ್ರಯೋಜನ ನೀಡುವುದಿಲ್ಲ.
ಬ್ರಿಟನ್‌ ಸರ್ಕಾರದ ಮಾನ್ಯತೆ ಪಡೆದ ಪಟ್ಟಿಯಲ್ಲಿ ಭಾರತದಂತಹ ದೇಶದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿಸಿದ ಅಥವಾ ಲಸಿಕೆ ಹಾಕಿಸದ ಪ್ರಯಾಣಿಕರು ಕಡ್ಡಾಯವಾಗಿ ನಿರ್ಗಮನ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಬ್ರಿಟನ್ನಿಗೆ ಆಗಮಿಸಿದ ನಂತರ, ಅವರು 10 ದಿನಗಳ ವರೆಗೆ ಸ್ವಯಂ-ಪ್ರತ್ಯೇಕವಾಗಿರಬೇಕು. ಪ್ರಯಾಣಿಕರು ತಮ್ಮ ಹೋಮ್ ಕ್ಯಾರೆಂಟೈನ್ ಅನ್ನು ‘ಟೆಸ್ಟ್ ಟು ರಿಲೀಸ್’ ಸೇವೆಯ ಅಡಿಯಲ್ಲಿ ಸುಮಾರು 5 ದಿನಗಳವರೆಗೆ ಕಡಿಮೆ ಮಾಡಲು ಆಯ್ಕೆ ಮಾಡಬಹುದು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement