ವಿಜಯಪುರ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಮೂರು ಬಾರಿ ಕಂಪಿಸಿದ ಭೂಮಿ..!

ವಿಜಯಪುರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ಸಂಭಿಸಿರುವುದು ದಾಖಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಆಲಮಟ್ಟಿ ಹಾಗೂ ಕಲಬುರಗಿಯಲ್ಲಿರುವ ರಿಕ್ಟರ್ ಮಾಪಕದಲ್ಲಿ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದ ಬಗ್ಗೆ ದಾಖಲಾಗಿದೆ. ಅಲ್ಲದೇ ಸದರಿ ಸಂಭವಿಸಿದ ಭೂಕಂಪನ ಅಪಾಯಕಾರಿ ಅಲ್ಲದ ಕಾರಣ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದೂ ಜಿಲ್ಲಾಡಳಿತ ಸಾರ್ವಜನಿಕರಿಗೆ ತಿಳಿಸಿದೆ.
ತಿಕೋಟಾ ತಾಲೂಕಿನ‌ ಬಿಜ್ಜರಗಿ ಗ್ರಾಮದ 2.9 ಕಿ.ಮೀ. ಅಂತರದಲ್ಲಿ ಈಶಾನ್ಯ ಭಾಗದಲ್ಲಿ ಅ.2ರಂದು ಬೆಳಗ್ಗೆ. 8-31 ಗಂಟೆಗೆ ಲಘು ಭೂಕಂಪನ‌ ಸಂಭವಿಸಿದೆ. 10 ಕಿ.ಮೀ. ಆಳದಲ್ಲಿ ಸಂಭವಿಸಿದ ಭೂಕಂಪನ 2 ಪ್ರಮಾಣದಷ್ಟಿತ್ತು. ಇದಲ್ಲದೇ ಅ.1 ರಂದು ಬಸವನಬಾಗೇಬಾಡಿಯ ಮಸೂತಿ ಬಳಿ 15 ಕಿ.ಮೀ ಆಳದಲ್ಲಿ ಮಧ್ಯಾಹ್ನ 1.47 ಕ್ಕೆ ಭೂಕಂಪ ಸಂಭವಿರುವುದು ದಾಖಲಾಗಿದೆ. ಅ.1 ರಂದೇ ಮಧ್ಯಾಹ್ನ 4.10 ಕ್ಕೆ ವಿಜಯಪುರ ನಗರದ ನೈರುತ್ಯ ಭಾಗದಲ್ಲಿ 10 ಕಿ.ಮೀ. ಅಂತರದಲ್ಲಿ ಭೂಕಂಪ ಸಂಭವಿಸಿರುವುದು ದಾಖಲಾಗಿದೆ.
ತಿಕೋಟಾ ತಾಲೂಕಿನ ಬಿಜ್ಜರಗಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಹತ್ತು ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಘೊಣಸಗಿ, ಮಲಕನದೇವರಹಟ್ಟಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ ಭಾಗದಲ್ಲಿ ಭೂಮಿ ಕಂಪಿಸಿದೆ.
ನಿನ್ನೆ ಮಧ್ಯಾಹ್ನ ಬಸವನಬಾಗೇವಾಡಿ ತಾಲೂಕಿನ ಮಸೂತಿಯಲ್ಲಿ, ಸಂಜೆ ವಿಜಯಪುರದಲ್ಲಿ ಭೂಕಂಪನವಾಗಿದ್ದು, ಜಿಲ್ಲೆಯ ವಿವಿಧೆಡೆ ಎರಡು ಸಲ ಭೂಮಿ ಕಂಪಿಸಿತ್ತು. ಇಂದು ಮತ್ತೆ ಭೂಕಂಪ ಆಗಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.ಸೆಪ್ಟೆಂಬರ್ 4ರಂದು ರಾತ್ರಿ 3.9ನಷ್ಟು ತೀವ್ರತೆಯ ಭೂಕಂಪ ಈ ಜಿಲ್ಲೆಯಲ್ಲಿ ಆಗಿತ್ತು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement