ಕುಮಟಾ: ಸ್ಟೇರಿಂಗ್‌ ಲಾಕ್‌ ಆಗಿ ಉರುಳಿದ ಟಿಪ್ಪರ್‌, ಪವಾಡ ಸದೃಶ ಪಾರಾದ ಮೂವರು

ಕುಮಟಾ; ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಗಿಬ್‌ ಹೈಸ್ಕೂಲ್ ಸಮೀಪ ಚಲಿಸುತ್ತಿದ್ದ ಟಿಪ್ಪರೊಂದು ಸ್ಟೇರಿಂಗ್ ಲಾಕಾಗಿ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸೈಕಲ್ ನಿಲ್ಲಿಸಿ ಮಾತಾಡುತ್ತಿದ್ದ ಇಬ್ಬರು ಉರುಳಿ ಬೀಳುತ್ತಿರುವ ಟಿಪ್ಪರ್ ಅಡಿಯಲ್ಲಿ ಸಿಲುಕಿದ್ದರು. ಆದರೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಉರುಳುತ್ತಿರುವಾಗ ತಕ್ಷಣ ಇಬ್ಬರೂ ಮಲಗಿ ಟಿಪ್ಪರ್ ಉರುಳುತ್ತಿರುವಂತೆ ಅದರ ಚಕ್ರ ಮತ್ತು ಇಂಜಿನ್ ನಡುವಿನ ಗ್ಯಾಪಿನಲ್ಲಿ ಉರುಳುತ್ತಾ ಕೆಳಗಿನ ಗಟಾರಕ್ಕೆ ಬಿದ್ದಿದ್ದಾರೆ.
ತಕ್ಷಣ ಸಾರ್ವಜನಿಕರು ಇವರನ್ನು ಹೊರಗೆ ತೆಗೆದು ಬಚಾವು ಮಾಡಿದ್ದಾರೆ. ಟಿಪ್ಪರ್ ಉರುಳಿ ಮರಕ್ಕೆ ಬಡಿದು ನಿಂತಿದ್ದು, ಚಾಲಕ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಮಟಾ ಪಿಎಸ್‌ಐ ಆನಂದ ಮೂರ್ತಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.ಈ ಪ್ರದೇಶದಲ್ಲಿ ಮೇಲಿಂದ ಮೇಲೆ ಅಪಘಾತ ಸಂಭವಿಸುತ್ತಿದೆ. ಚತುಷ್ಪದ ರಸ್ತೆ ಅಗಲೀಕರಣ ಕುಂಟುತ್ತ ಸಾಗಿದ್ದು ಬೇಗನೆ ಕಾಮಗಾರಿ ಮುಗಿದಲ್ಲಿ ಇಂತಹ ಅಪಘಾತಕ್ಕೆ ತಡೆಯಾಗ ಬಹುದು ಎನ್ನುವದು ಸಾರ್ವಜನಿಕರ ಮಾತಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement