23 ರಾಜ್ಯಗಳಿಗೆ 7,274 ಕೋಟಿ ರೂ.ಗಳ ವಿಪತ್ತು ಪ್ರತಿಕ್ರಿಯೆ ನಿಧಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್ಡಿಆರ್‌ಎಫ್) ತನ್ನ ಪಾಲು 7,274.40 ಕೋಟಿ ರೂ.ಗಳನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ವಿಪತ್ತಿನಿಂದ ಸೃಷ್ಟಿಯಾಗುವ ಯಾವುದೇ ತುರ್ತ ಪರಿಸ್ಥಿತಿ ನಿಭಾಯಿಸಲು ತಮ್ಮ ಎಸ್ಡಿಆರ್‌ಎಫ್‌ ನಲ್ಲಿ ರಾಜ್ಯ ಸರ್ಕಾರಗಳು ಸಾಕಷ್ಟು ನಿಧಿ ಹೊಂದಲು ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
1,599.20 ಕೋಟಿ ರೂ.ಗಳನ್ನು ಎರಡನೇ ಮುಂಗಡ ಕಂತಾಗಿ ಈಗಾಗಲೇ ಐದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.
ಎಸ್ಡಿಆರ್‌ಎಫ್‌ ನ ಕೇಂದ್ರ ಸರ್ಕಾರದಭಾಗವಾದ ಒಟ್ಟು 7,274.40 ಕೋಟಿ ರೂ.ಗಳ ಕಂತನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಅಮಿತ್ ಶಾ ಅವರು ಅನುಮೋದನೆ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement