
ಹಾಸನ: ಶಾಸಕರ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 58 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗೀಡಾಗಿದ್ದು, ಆಕೆಯ ಮೊಮ್ಮಗ ಕೂಡ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹನುಮಂತನಗರದ ನಿವಾಸಿ ಹೂವಮ್ಮ (58) ಎಂಬವರು ಮೃತಪಟ್ಟವರ ಎಂದು ಗುರುತಿಸಲಾಗಿದೆ. ಈಕೆಯ ಮೊಮ್ಮಗ ಪ್ರೀತಂ ಗಾಯಗೊಂಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿಯಲ್ಲಿ ಕೂತಿದ್ದ ಹೂವಮ್ಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುರಸ್ತಿ ಮಾಡಿಸಲು ಕಾರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವಾಗ ಇದು ಸಂಭವಿಸಿದೆ. ಬೈಕ್ ಏಕಾಕಏಖಿ ಬಂದಿದ್ದರಿಂದ ಡಿಕ್ಕಿ ಹೊಡೆದಿದೆ ಎಂದು ಚಾಲಕ ಹೇಳಿದರೆ ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ಸಂದರ್ಭ ಕಾರಿನಲ್ಲಿ ಶಾಸಕರು ಇರಲಿಲ್ಲ. ಪ್ರಕರಣ ಸಂಭವಿಸಿದ ಸ್ಥಳಕ್ಕೆ ಬೇಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ