ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧಿಸಿದ ನಂತರ ಶಾರುಖ್ ಖಾನ್ ತನ್ನ ಮಗನ ಜೊತೆ ಮಾತನಾಡಿದ್ದಾರೆ.
ಆರ್ಯನ್ ಖಾನ್ ಬಂಧನದ ನಂತರ, ಕಾನೂನು ಪ್ರಕ್ರಿಯೆಯ ಭಾಗವಾಗಿ, ನಾರ್ಕೋಟಿಕ್ಸ್ ಬ್ಯೂರೋ ತನ್ನ ತಂದೆ ಶಾರೂಖ್ ಖಾನ್ ಜೊತೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ನೀಡಿತು. ಸುಮಾರು ಎರಡು ನಿಮಿಷಗಳ ಕಾಲ ಮಾತನಾಡಿದರು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಎನ್‌ಸಿಬಿ ವಿಚಾರಣೆಯ ಉದ್ದಕ್ಕೂ, ಆರ್ಯನ್ ಖಾನ್ ನಿರಂತರವಾಗಿ ಎಂದು ಮೂಲಗಳು ತಿಳಿಸಿವೆ. ಎನ್‍ಸಿಬಿ ಅಧಿಕಾರಿಗಳು ಕೂಡ ಆರ್ಯನ್ ಖಾನ್ ಕಳೆದ 4 ವರ್ಷಗಳಿಂದ ಮಾದಕ ದ್ರವ್ಯ ಸೇವಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಶನಿವಾರ ರಾತ್ರಿ ಮುಂಬೈ ಸಮುದ್ರದಲ್ಲಿ ಕ್ರೂಸ್‌ನಲ್ಲಿ ರೇವ್ ಪಾರ್ಟಿ ಮೇಲೆ ಎನ್ಸಿಬಿ ಅಧಿಕಾರಿಗಳು ನಡೆಸಿದ ನಂತರ ಆರ್ಯನ್ ಖಾನ್ ಮತ್ತು ಇತರ ಏಳು ಜನರನ್ನು ಭಾನುವಾರ ಬಂಧಿಸಲಾಗಿತ್ತು.
ಎನ್‌ಸಿಬಿಯ ಬಂಧನ ಜ್ಞಾಪನೆಯ ಪ್ರಕಾರ, 13 ಗ್ರಾಂ ಕೊಕೇನ್, ಐದು ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಮಾತ್ರೆಗಳ ಎಕ್ಸಟಸಿ ಮತ್ತು 1.33 ಲಕ್ಷ ರೂಗಳನ್ನು ಮುಂಬೈ ಕ್ರೂಸ್ ಹಡಗಿನಲ್ಲಿ ದಾಳಿ ನಡೆಸಿದಾಗ ವಶಪಡಿಸಿಕೊಳ್ಳಲಾಗಿದೆ.
ಆರ್ಯನ್ ಖಾನ್ ಜೊತೆಗೆ ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಬಂಧಿತರು. ಆರ್ಯನ್ ಖಾನ್ ಮತ್ತು ಅರ್ಬಾಜ್ ಸುಮಾರು 15 ವರ್ಷಗಳಿಂದ ಸ್ನೇಹಿತರು.
ಆರ್ಯನ್ ಖಾನ್ ವಿರುದ್ಧ ಸೆಕ್ಷನ್ 27 (ಯಾವುದೇ ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ಪದಾರ್ಥ ಸೇವನೆಗಾಗಿ ಶಿಕ್ಷೆ), 8 ಸಿ (ಉತ್ಪಾದನೆ, ತಯಾರಿಕೆ, ಹೊಂದಿರುವಿಕೆ, ಮಾರಾಟ ಅಥವಾ ಔಷಧಗಳ ಖರೀದಿ) ಮತ್ತು ಮಾದಕದ್ರವ್ಯ ಔಷಧಗಳು ಮತ್ತು ಮನೋವಿಕೃತ ಪದಾರ್ಥಗಳ ಕಾಯಿದೆ (ಎನ್ಡಿಪಿಎಸ್) ಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. .
ನಿಮ್ಮ ಕಾಮೆಂಟ್ ಬರೆಯಿರಿ