ವಾಹನಗಳಲ್ಲಿ ಸಂಗೀತಮಯ ಹಾರನ್ ಅಳವಡಿಸಲು ಕಾನೂನು:ಗಡ್ಕರಿ

ನವದೆಹಲಿ; ವಾಹನಗಳಲ್ಲಿ ಇನ್ನು ಮುಂದೆ ಸಂಗೀತಮಯ ಹಾರನ್ (ಶಬ್ದ) ಅಳವಡಿಸಲು ಅಗತ್ಯ ಕಾನೂನು ತಿದ್ದುಪಡಿ ತರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ. ನಾಸಿಕ್‍ನಲ್ಲಿ ಹೆದ್ಧಾರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಯಂಬ್ಯುಲೆನ್ಸ್ ಮತ್ತು ಪೊಲೀಸ್ ಅಧಿಕಾರಿಗಳ ವಾಹನಗಳಲ್ಲಿ ಬಳಸುವ ಸೈರನ್‍ಗಳನ್ನು ಬದಲಾವಣೆ ಮಾಡಲು ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಆಂಬ್ಯುಲೆನ್ಸ್, ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರ ವಾಹನಗಳಲ್ಲಿ ಬಳಸುವ ಸೈರನ್‍ಗಳು ಕಿರಿಕಿರಿ ಉಂಟು ಮಾಡುತ್ತಿವೆ, ಕರ್ಕಶ ಶಬ್ದಗಳು ಕಿವಿಗೂ ಹಾನಿ ಮಾಡುತ್ತಿವೆ. ಅವುಗಳ ಬದಲಿಗೆ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿ ಬರುವ ಮಧುರವಾದ ಸಂಗೀತವನ್ನು ಅಳವಡಿಸಲು ಚಿಂತನೆ ನಡೆದೆ ಎಂದು ಹೇಳಿದರು.
ಭಾರತೀಯ ಸಂಗೀತಗಾರರು ನುಡಿಸಿರುವ ತಬಲಾ, ಕೊಳಲು, ವೈಯಲಿನ್, ಹಾರ್ಮೋನಿಯಂ, ಬಾಯಲ್ಲಿ ಸೃಷ್ಟಿಸಲಾದ ಸಂಗೀತದ ಟೋನ್‍ಗಳನ್ನು ವಾಹನಗಳ ಹಾರ್ನಗಳಲ್ಲಿ ಬಳಕೆ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಅಗತ್ಯ ಕಾನೂನು ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಾಹನಗಳಲ್ಲಿ ಕರ್ಕಶ ಶಬ್ದ ಮಾಡುವ ಹಾರನ್‍ಗಳನ್ನು ಬಳಕೆ ಮಾಡಲು ನ್ಯಾಯಾಲಯಗಳು ನಿರ್ಬಂಧ ವಿಧಿಸಿವೆ. ಕಾಲ ಕಾಲಕ್ಕೆ ಸಾರಿಗೆ ನಿಯಮಾವಳಿಗಳ ಬದಲಾವಣೆ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳು ಹಲವಾರು ಸೂಚನೆಗಳನ್ನು ನೀಡುತ್ತಿವೆ. ಅದರ ಪ್ರಕಾರ ಕರ್ಕಶ ಶಬ್ದಗಳನ್ನು ನಿಷೇಧಿಸಲಾಗಿದೆ. ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ನೋಂದಣಿ ಫಲಕದ ಜೊತೆಯಲ್ಲಿ ಅಳವಡಿಕೆ ಮಾಡಲಾದ ನಾಮಫಲಕಗಳನ್ನು ತೆರವು ಮಾಡಲು ಸೂಚನೆ ನೀಡಿದೆ.ಸಚಿವರು ಸೇರಿದಂತೆ ಗಣ್ಯ ವ್ಯಕ್ತಿಗಳು ಬಳಕೆ ಮಾಡುವ ಕೆಂಪು ದೀಪಗಳ ಬಳಕೆಗೂ ಸ್ಪಷ್ಟ ಸೂಚನೆ ನೀಡಲಾಗಿದೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement