ಅಪ್ಪ ಮಾಡಿದ ಫೈರಿಂಗ್‌ನಿಂದ ಮಗನಿಗೇ ಗುಂಡೇಟು..!

ಮಂಗಳೂರು: ಅಪ್ಪನಿಂದಲೇ ಮಗನ ಮೇಲೆ ಫೈರಿಂಗ್ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.೧
ಮೋರ್ಗನ್ಸ್ ಗೇಟ್ ಬಳಿ ಅಪ್ಪನಿಂದಲೇ ಮಗನ ಮೇಲೆ ಶೂಟೌಟ್ ನಡೆದಿದೆ. ಬಾಲಕ ಸುಧೀಂದ್ರ (14) ಎಂಬಾತನ ತಲೆಗೆ ಗುಂಡು ತಗುಲಿದೆ ಎನ್ನಲಾಗಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಉದ್ಯಮಿಯ ಕಚೇರಿಯಲ್ಲಿಯೇ ಘಟನೆ ನಡೆದಿದ್ದು ಕೆಲಸಗಾರರ ನಡುವಿನ ಗೊಂದಲದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಕುರತು ಪ್ರತಿಕ್ರಿಯೆ ನೀಡಿದ ಕಮಿಷನರ್, ಯಾರು ಗುಂಡು ಹಾರಿಸಿದ್ದಾರೆಂದು ಈಗಲೇ ಸ್ಪಷ್ಟವಾಗಿ ಹೇಳಲಾಗದು. ಸಿಸಿ ಕೆಮರಾ ದೃಶ್ಯ ಪರಿಶಿಲಿಸಲಾಗುವುದು. ಗುಂಡು ಎಡಗಣ್ಣಿನ ಭಾಗದಿಂದ 7-8 ಇಂಚು ಒಳಗೆ ಹೋಗಿದೆ. ಗಾಯಾಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ. ಎರಡು ರೌಂಡ್ ಗುಂಡು ಹಾರಾಟವಾಗಿದೆ ಎಂದು ಅವರು ಹೇಳಿದರು.

ವೇತನ ಕೇಳಿದ ವಿಚಾರದಲ್ಲಿ ನೌಕರರ ಜತೆ ವಾಗ್ವಾದ ನಡೆದಿತ್ತು. ಆಗ ನೌಕರರ ರಾಜೇಶ್ ನೌಕರರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಪುತ್ರ ಸುಧೀಂದ್ರ ಪ್ರಭುಗೆ ಗುಂಡು ತಗುಲಿದೆ ಎಂದು ಹೇಳಲಾಗಿದೆ. ಆದರೆ ಯಾರು ಎಂಬುದು ಸ್ಪಷ್ಟವಾಗಿಲ್ಲ. ಇದನ್ನು ಪೊಲೀಸರು  ಸ್ಪಷ್ಟಪಡಿಸಬೇಕಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement