ಶಿಕ್ಷಣ ಸಚಿವರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್- ರಸಾಯನ ಶಾಸ್ತ್ರ ಪ್ರಯೋಗಾಲಯ ಉದ್ಘಾಟನೆ

ಕುಮಟಾ; ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು .ಭಾರತ ಶಿಕ್ಷಣದಲ್ಲಿ ಯಾವ ದೇಶಕ್ಕಿಂತ ಕಡಿಮೆ ಇಲ್ಲ. ಜಗತ್ತಿನ ಪ್ರಮುಖ ದೇಶದಲ್ಲಿ ಶೇ.೫೦ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಭಾರತೀಯರಿದ್ದಾರೆ. ಇಂದು ಭಾರತದ ಹಳ್ಳಿ-ಹಳ್ಳಿಗಳಲ್ಲಿ ಪುರೋಹಿತರು ಸಿಗದಿದ್ದರೂ ಸೋಪ್ಟ್‌ವೇರ್ ಎಂಜಿನಿಯರ್ ಸಿಗುತ್ತಿದ್ದಾರೆ ಎಂದು ರಾಜ್ಯ ಪ್ರಥಮಿಕ ಮತ್ತು ಮಾದ್ಯಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ೫ ಉಪನ್ಯಾಸಕ ಕೊಠಡಿ,೧ ಕಂಪ್ಯೂಟರ್ ಲ್ಯಾಬ್ ಹಾಗೂ ೧ ಆಧುನಿಕ ರಸಾಯನ ಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು. .ಮಾಜಿ ಪ್ರಧಾನಿ ದಿ.ವಾಜಪೇಯಿಯವರು ದೇಶದಲ್ಲಿ ಸರ್ವಶಿಕ್ಷಣ ಅಭಿಯಾನ ಆರಂಭಿಸಿ ೧೦ ವರ್ಷದ ಅವಧಿಯಲ್ಲಿ ದೇಶದ ಎಲ್ಲ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಅಗತ್ಯತೆ ಸಾಧಿಸಲಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಮಾನ ಆಧ್ಯತೆ ನೀಡಿದ್ದು ಬಿಜೆಪಿ ಸಾಧನೆಯಾಗಿದೆ ಎಂದರು.
ಜಗತ್ತೇ ಭಾರತದ ಬೆಳವಣಿಗೆಯನ್ನು ಕಣ್ಣರಳಿಸಿ ನೋಡುತ್ತಿದೆ.ಸಾಂಕ್ರಾಮೀಕ ರೋಗ ಆರಂಭವಾದಾಗ ೧೩೮ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಕೊರೋನಾ ನಿಯಂತ್ರಣ ಅಸಾಧ್ಯ ಎನ್ನುವ ಮಾತು ವಿದೇಶದ ಪ್ರಮುಖರಿಂದ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಭಾರತದಲ್ಲೇ ವ್ಯಾಕ್ಷಿನ್ ಕಂಡುಹಿಡಿದ ಭಾರತೀಯ ವಿಜ್ಞಾನಿಗಳ ಸಾಧನೆ ಅದ್ಭುತವಾದುದು. ಹಳ್ಳಿಯಿಂದ ಬಂದವರೇ ಇಂದು ಭಾರತದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದರು.
ಈ ಬಾರಿ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳು ಐಎಎಸ್ ಪರಿಕ್ಷೆಯಲ್ಲಿ ಹೆಚ್ಚಿನ ರ್‍ಯಾಂಕ್ ಪಡೆದು ಕನ್ನಡದ ಘನತೆ ಹೆಚ್ಚಿಸಿದ್ದಾರೆ ಎಂದರು.
ದೇಶದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ರೀತಿಯಿಂದ ಸಹಾಯ ನೀಡಿ ದೇಶವನ್ನು ಉನ್ನತೀಕರಣದತ್ತ ಒಯ್ಯುವುದೇ ಬಿಜೆಪಿಯ ಪ್ರಮುಖ ಧ್ಯೇಯ ಎಂದರು.
ಕಾರ್ಯಕ್ರಮದಲ್ಲಿ ಸಿ.ಇ.ಟಿ ಯಲ್ಲಿ ೪೩೫ ನೇ ರ್‍ಯಾಂಕ್ ಪಡೆದ ಕೊಂಕಣ ಶಾಲೆಯ ವಿದ್ಯಾರ್ಥಿ ಪೂರ್ಣಿಮಾ ಪಟಗಾರ ಅವರನ್ನು ಸನ್ಮಾನಿಸಿ ಸಚಿವರು ಶುಭ ಹಾರೈಸಿದರು.
ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ,ಅಭಿವೃದ್ದಿ ,ನೂತನ ಕಟ್ಟಡ ರಚನೆ ಇತ್ಯಾದಿ ಸಮಸ್ಯೆ ಎದುರಿಸಿ ಅಭಿವೃದ್ಧಿಗೊಂಡ ಕಾಲೇಜಿನ ಇತಿಹಾಸ ತಿಳಿಸಿದರು.ಕಾಲೇಜಿನಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ೧.೨೫ ಕೋಟಿ ರೂ. ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಿಸುವ ಯೋಜನೆ ರೂಪಿಸಿದ್ದೇವೆ.ಶಾಸಕರ ನಿಧಿಯನ್ನು ಇದಕ್ಕೆ ಬಳಸಲಾಗುವುದು,ಶಿಕ್ಷಣ ಮಂತ್ರಿಗಳಾದ ನಾಗೇಶ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಎಂದು ತಿಳಿಸಿದರು.
ಕಾಯ್ಕ್ರಮದಲ್ಲಿ ಉಪನಿರ್ದೇಶಕರಾದ ಹನುಮಂತಪ್ಪ,ಜಿಲ್ಲಾ ಶಿಕ್ಷಣ ಅಭಿವೃದ್ಧಿ ಉಶಪನಿರ್ದೆಶಕರಾದ ಈಶ್ವರ ನಾಯ್ಕ ಆಡಳಿತ ಉಪನಿರ್ದೇಶಕರಾದ ಹರೀಷ ಗಾಂವಕರ್, ತಹಶೀಲ್ದಾರ ವಿವೇಕ ಶೇಣ್ವಿ ,ಪ್ರಾಚಾರ್ಯ ಸತೀಶ ನಾಯ್ಕ ಉಪಸ್ಥಿತರಿದ್ದರು.
————————

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement