ನಾಯಿಯಿಂದ ಮತ್ತೊಂದು ನಾಯಿಗೆ ರಕ್ತದಾನ…! ರಕ್ತದಾನ ಮಾಡಿ ಮತ್ತೊಂದು ನಾಯಿ ಜೀವ ಉಳಿಸಿದ ಜರ್ಮನ್ ಶಫರ್ಡ್..!

ಧಾರವಾಡ: ಒಂದು ನಾಯಿಯಿಂದ ಮತ್ತೊಂದು ನಾಯಿಗೆ ರಕ್ತದಾನ ಮಾಡಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

ವಿಜಯಪುರ ಮೂಲದ 7 ತಿಂಗಳ ರಾಟ್ ವಿಲ್ಲರ್ ತಳಿ ನಾಯಿಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ಆ ನಾಯಿದ ಹೊಟ್ಟೆಯಲ್ಲಿ ರಕ್ತ ಸಾವ್ರವಾಗಿದ್ದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ರಾಟ್ ವಿಲ್ಲರ್ ಮಾಲಿಕ ಧಾರವಾಡ ಕೃಷಿ ವಿವಿಯಲ್ಲಿರುವ ಪಶು ಆಸ್ಪತ್ರೆಗೆ ಅದನ್ನು ತಂದಿದ್ದರು. ಕೃಷಿ ವಿವಿಯ ಪಶು ಆಸ್ಪತ್ರೆ ವೈದ್ಯ ಅನಿಲ್ ಪಾಟೀಲ ರಾಟ್ ವಿಲ್ಲರಗೆ ಒಂದು ಯುನಿಟ್ ರಕ್ತ ಹಾಕಿದರೆ ಉಳಿಯುತ್ತದೆ ಎಂದು ತಿಳಿಸಿದರು. ಅಲ್ಲದೆ ಶ್ವಾನ ಪ್ರಿಯ ಸೋಮಶೇಖರ ಅವರನ್ನು ಸಂಪರ್ಕಿಸಿ ಒಂದು ನಾಯಿಯಿಂದ ರಕ್ತದಾನ ಮಾಡಿಸುವಂತೆ ವಿನಂತಿಸಿದ್ದರು ಧಾರವಾಡದ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದಾರೆ.
ಸೋಮಶೇಖರ್ ಕೂಡ ಮೊದಲು ರಾಟ್ ವಿಲ್ಲ‌ರ್‌ ಗಾಗಿ ಹಲವು ಕಡೆ ರಕ್ತ ಹುಡುಕಾಟ ನಡಸಿದ್ದರು. ಆದರೆ ಎರಡೂ ನಾಯಿಗಳ ರಕ್ತ ಮಾದರಿ ಹೊಲಿಕೆಯಾಗದ ಕಾರಣ, ಕೊನೆಗೆ ತನ್ನ ಬಳಿ ಇದ್ದ ನಾಯಿಯ ರಕ್ತದ ಮಾದರಿ ತಪಾಸಣೆ ಮಾಡಿಸಿದ್ದಾರೆ. ಈ ಎರಡೂ ನಾಯಿಗಳ ರಕ್ತದ ಮಾದರಿ ಒಂದೇ ಇದ್ದ ಕಾರಣ ರಕ್ತ ದಾನ ಮಾಡಿಸಿದರು. ಸದ್ಯ ನಾಯಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement