ಶಿಕ್ಷಕರ ಕಾರ್ಯ ಶ್ಲಾಘನೆ ಮಾಡಿದ ಸಚಿವ ನಾಗೇಶ, ಅಧಿಕಾರಿಗಳ ಕೆಲಸದ ಬಗ್ಗೆ ಅತೃಪ್ತಿ

ಕುಮಟಾ;ರಾಜ್ಯ ಪ್ರಾಥಮಿಕ ಮತ್ತು ಪ್ರಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಗುರುವಾರ sಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾ ನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು.ತಡ ರಾತ್ರಿ ೯ ಘಂಟೆಯ ತನಕ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕರನ್ನು ಮತ್ತು ಬಿ.ಇ.ಒ ಮತ್ತಿತರ ಅಧಿಕಾರಿಗಳ ಮೇಲೆ ಜಿಲ್ಲೆಯ ಪ್ರಗತಿ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಮಾಡಿದರು.
ಪ್ರಾಥಮಿಕ ಶಾಲೆಯ ಸಮಸ್ಯೆ, ಅಲ್ಲಿಯ ಕೊಠಡಿಯ ಅಗತ್ಯತೆ, ಸಮೀಕ್ಷೆ ನಡೆಸಿರುವ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಈ ಸಂದರ್ಭದಲ್ಲಿ ಕೆಲವು ಶೈಕ್ಷಣಿಕ ಅಧಿಕಾಗಳ ಉತ್ತರಕ್ಕೆ ಸಮಾಧಾನ ಗೊಳ್ಳದ ಸಚಿವರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.
ಶಿಕ್ಷಕರೇ ಸೂಪರ್; ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೈಕ್ಷಣಿಕ ಅಧಿಕಾರಿಗಳ ಶಿಕ್ಷಣ ಸುಧಾರಣೆಯ ಕಾರ್ಯವೈಖರಿಗೆ ಅಸಮಾಧಾನ ಗೊಂಡ ಸಚಿವರು ಜಿಲ್ಲೆಯಲ್ಲಿ ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರವೇ ಪ್ರಮುಖವಾಗಿದೆ ಎಂದು ಹೇಳಿದರು.
ಕೆಲವು ದಿನಗಳ ನಂತರ ಪುನಃ ಜಿಲ್ಲೆಗೆ ಬಂದು ಪರಿಶೀಲಿಸುತ್ತೇನೆ, ಅಧಿಕಾರಿಗಳು ಸಮರ್ಪಕ ಕೆಲಸ ನಿರ್ವಹಿಸಬೇಕು ಎಂದರು.
ಉಪನ್ಯಾಸಕರ ನೇಮಕಾತಿಗೆ ಪ್ರಯತ್ನಿಸುವ ಭರವಸೆ;
ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕೆನರಾ ಕಾಲೇಜು ಸೋಸೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯದರ್ಶಿ ಸುಧಾಕರ ನಾಯಕ ವಿವಿಧ ಬೇಡಿಕೆಗಳ ಕುರಿತು ಮನವಿ ನೀಡಿದರು.ಉಪನ್ಯಾಸಕರ ನೇಮಕಾತಿ ಆಗದೆ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ಈ ಕುರಿತು ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು. ಬಾಳಿಗಾ ಕಾಲೇಜಿಗೆ ಆಗಮಿಸಿದ ಸಂದರ್ಭದಲ್ಲಿ ಕೆನರಾ ಕಾಲೇಜು ಸೊಸೈಟಿಯ ಕಾಯಾಧ್ಯಕ್ಷರಾದ ಡಿ.ಎಂ.ಕಾಮತ್, ಆಡಳಿತ ಮಂಡಳಿಯ ನಾರಾಯಣ ಶ್ಯಾನಭಾಗ, ಅತುಲ್ ಕಾಮತ್, ಪ್ರಾಚಾರ್ಯ ಡಾ.ಪಿ.ಕೆ.ಭಟ್ಟ, ಡಾ.ಎಸ್.ವಿ.ಶೇಣ್ವಿ. ಡಾ.ವಿ.ಎಂ.ಪೈ.ಶಿಕ್ಷಣ ಪ್ರೇಮಿಯಾಧ ಹಿರಿಯರಾದ ಪುರುಶೋತ್ತಮ ಹೆಗಡೆಕರ ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement