ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ರಾಷ್ಟ್ರಪತಿ ರಾಮನಾಥ ಕೋವಿಂದ್‌

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀಶಾರದಾಂಬೆಯ ದರ್ಶನಕ್ಕಾಗಿ ರಾಮನಾಥ ಕೋವಿಂದ್‌ ಆಗಮಿಸಿದ್ದರು.
ಪತ್ನಿ ಸವಿತಾ ಕೋವಿಂದ್‌ ಹಾಗೂ ಪುತ್ರಿ ಸ್ವಾತಿ ಕೋವಿಂದ್‌ ಕೂಡ ಜೊತೆಯಲ್ಲಿದ್ದರು. ಮಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ರಾಷ್ಟ್ರಪತಿಗಳಿಗೆ ಶೃಂಗೇರಿಯಲ್ಲಿ ಆನೆ, ಆಶ್ವ, ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ನಂತರ ಕುಟುಂಬ ಸಮೇತರಾಗಿ ಶಾರದಾಂಬೆಯ ದರ್ಶನ ಪಡೆದು ನವರಾತ್ರಿ ಉತ್ಸವದಲ್ಲಿ ಭಾಗಿಯಾದರು. ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶೃಂಗೇರಿ ಗುರುಗಳ ಆಶೀರ್ವಾದ ಪಡೆದಿದ್ದಾರೆ.
ಶೃಂಗೇರಿ ದೇವಸ್ಥಾನದಿಂದ ಹೆಲಿಪ್ಯಾಡ್‌ಗೆ ತೆರಳುವ ವೇಳೆಯಲ್ಲಿ ರಸ್ತೆಯಲ್ಲಿ ಕಾರಿನಿಂದ ಕೆಳಗೆ ಇಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಸ್ತೆ ಪಕ್ಕದಲ್ಲಿ ತಮ್ಮನ್ನು ಕಾಣಲು ನಿಂತಿದ್ದ ಮಕ್ಕಳತ್ತ ಕೈ ಬೀಸಿದ್ದಾರೆ. ಭದ್ರತೆಯನ್ನೂ ಲೆಕ್ಕಿಸದೇ ರಾಷ್ಟ್ರಪತಿಗಳು ಕಾರಿನಿಂದ ಕೆಳಗಿಳಿಯುತ್ತಲೇ ನೆರೆದಿದ್ದವರು ಸಂಭ್ರಮಿಸಿದರು.
ಶೃಂಗೇರಿ ಶಾರದಾಂಬೆ ಸನ್ನಿಧಾನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಶೃಂಗೇರಿ ಪಟ್ಟಣವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಪಟ್ಟಣದಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಜೊತೆಗೆ ಎಂಟು ನೂರರಿಂದ ಸಾವಿರಕ್ಕೂ ಅಧೀಕ ಪೊಲೀಸರು, ಸ್ಟೇಟ್ ಹಾಗೂ ಸೆಂಟ್ರಲ್ ಇಂಟಲಿಜೆನ್ಸ್ ಪೊಲೀಸರು ಬಿಗಿ ಪೊಲೀಸ್‌ ಭದ್ರತೆ ಕೈಗೊಂಡಿದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement