ಶ್ರೀರಂಗಪಟ್ಟಣ ದಸರಾ ವೇಳೆ ಪಟಾಕಿ ಸದ್ದಿಗೆ ಬೆಚ್ಚಿದ ಆನೆಗಳು: ಆನೆಗಳ ಅಂಬಾರಿ ಮೆರವಣಿಗೆ ರದ್ದು..ವೀಕ್ಷಿಸಿ

ಮಂಡ್ಯ: ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ ವೇಳೆ ಪಟಾಕಿ ಸದ್ದಿಗೆ ಆನೆ ಬೆಚ್ಚಿಬಿದ್ದ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಆನೆ ಬೆಚ್ಚಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಣಾಮವಾಗಿ ಜಂಬೂಸವಾರಿಯನ್ನು ಸ್ಥಗಿತಗೊಳಿಸಲಾಯಿತು.
ಜಂಬೂಸವಾರಿ ವೇಳೆ ಅನತಿ ದೂರದಲ್ಲಿ ಪಟಾಕಿ ಸಿಡಿಸಲಾಗಿದೆ. ಇದರಿಂದ ಮೆರವಣಿಗೆಯಲ್ಲಿದ್ದ ಗೋಪಾಲಸ್ವಾಮಿ ಎಂಬ ಆನೆ ಬೆಚ್ಚಿ ಹಿಂದಕ್ಕೆ ತಿರುಗಿದೆ.

ಈ ವೇಳೆ ಜೊತೆಯಲ್ಲಿ ಸಾಗುತ್ತಿದ್ದ ಕಾವೇರಿ ಆನೆಯೂ ಕೊಂಚ ಹೆದರಿದೆ. ಹತ್ತಿರದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಲು ಶುರುಮಾಡಿದ ದೃಶ್ಯ ಕೂಡ ಕಂಡುಬಂದಿದೆ. ಆನೆ ಬೆಚ್ಚಿದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು.
ಪಟ್ಟಣದಲ್ಲಿ ಬೆಳಿಗ್ಗೆ ದಸರಾ ಜಂಬೂಸವಾರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದ್ದರು.
ಜಂಬೂಸವಾರಿ ಮೆರವಣಿಗೆಯು ಕಿರಂಗೂರ್‌ ಗೇಟ್‌ ಬನ್ನಿಮಂಟಪದಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ಶ್ರೀರಂಗನಾಥಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ತಲುಪಬೇಕಿತ್ತು. ಆದರೆ ಪಟಾಕಿ ಸದ್ದಿಗೆ ಆನೆ ಬೆಚ್ಚಿ ಆತಂಕ ನಿರ್ಮಾಣವಾಗಿದ್ದರಿಂದ ಜಂಬೂಸವಾರಿ ಸ್ಥಗಿತಗೊಳಿಸಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement