ಕಲಬುರಗಿ: ಗಡಿಕೇಶ್ವಾರ ಸುತ್ತಲ ಗ್ರಾಮಗಳಲ್ಲಿ ಮತ್ತೆ ಭೂಕಂಪನ 3.4 ತೀವ್ರತೆ ದಾಖಲು

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಮತ್ತೆ ಭೂಕಂಪ ಸಂಭವಿದೆ. ಇದರಿಂದ ಮನೆಯಲ್ಲಿ ಪಾತ್ರದ ಸಾಮಾನುಗಳು, ಗೋಡೆಗೆ ಹಾಕಿದ್ದ ಗಡಿಯಾರ ಮತ್ತಿತರ ವಸ್ತುಗಳು ಕೆಳಕ್ಕೆ ಬಿದ್ದಿವೆ.
ಇಂದು (ಭಾನುವಾರ) ಬೆಳಿಗ್ಗೆ 6.05 ನಿಮಿಷಕ್ಕೆ ಭೂಮಿಯಿಂದ ಜೋರು ಸದ್ದು ಕೇಳಿ ಬಂದಿದ್ದಲ್ಲದೇ ಭೂಮಿ ನಡುಗಿದ ಅನುಭವವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭೂಕಂಪದ ಭೀತಿಯಲ್ಲಿಯೇ ಜನ ಜೀವನ ನಡೆಸುತ್ತಿದ್ದು ಭೂಮಿ ಕಂಪಿಸಿದಾಗ ಮನೆಯಿಂದ ಹೊರ ಬಂದರು.
ಶನಿವಾರ ಬೆಳಿಗ್ಗೆ 5.37ಕ್ಕೆ 3.2 ತೀವ್ರತೆ ಶುಕ್ರವಾರ ಮಧ್ಯರಾತ್ರಿ 12.44ಕ್ಕೆ 2.6 ತೀವ್ರತೆಯ ಭಾನುವಾರ ಬೆಳಿಗ್ಗೆ 6.05ಕ್ಕೆ ಮತ್ತೆ ಭೂಕಂಪ ಸಂಭವಿಸಿದೆ. ದಾಖಲಾಗಿತ್ತು. ಮೂರು ದಿನಗಳಿಂದ ನಿರಂತರ ಭೂಕಂಪನ ಜತೆಗೆ ಭೂಮಿಯಿಂದ ಸದ್ದು ಕೇಳಿ ಬರುತ್ತಿದೆ. ಇದು ಜನರನ್ನು ಬೆಚ್ಚಿ‌ಬೀಳಿಸಿದೆ.
ಗಡಿಕೇಶ್ವಾರ, ಕುಪನೂರ, ಹಲಚೇರಾ, ತೇಗಲತಿಪ್ಪಿ, ಭಂಟನಳ್ಳಿ, ಬೆನಕಳ್ಳಿ, ರಾಯಕೋಡ, ಭೂತಪೂರ, ಚಿಂತಪಳ್ಳಿ, ರುದ್ನೂರು, ಹೊಸಳ್ಳಿ ಎಚ್ ಮೊದಲಾದ ಕಡೆ ಭೂಮಿಯು ನಡುಗಿದ ಅನುಭವವಾಗಿದೆ ಎಂದು ಹೇಳಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement