ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 27 ಐಎಎಸ್, 7 ಐಎಫ್‍ಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ. 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸೋಮವಾರ ಕರ್ನಾಟಕ ಸರ್ಕಾರ 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾಗಿ ಉಮಾಶಂಕರ್ ಬದಲು ಸೆಲ್ವಕುಮಾರ್ ನೇಮಕ ಮಾಡಲಾಗಿದೆ.
ರಾಯಚೂರು ಜಿಲ್ಲಾಧಿಕಾರಿ ಬಿ. ಸಿ. ಸತೀಶ ವರ್ಗಾವಣೆಗೊಂಡಿದ್ದು, ಕೊಡಗು ಜಿಲ್ಲಾಧಿಕಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ವರ್ಗಾವಣೆಗೊಂಡಿದ್ದಾರೆ.
ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. 4 ಉಪ ಕಾರ್ಯದರ್ಶಿಗಳಿಗೆ ಸ್ಥಳ ನಿಯೋಜಿಸಿ ಆದೇಶ ನೀಡಲಾಗಿದೆ. ಸರ್ಕಾರದ ಉಪ ಕಾರ್ಯದರ್ಶಿಗಳಿಬ್ಬರ ಸೇವೆ ಹಿಂಪಡೆಯಲಾಗಿದ್ದು, ಡಿಐಪಿಎರ್‌ಗೆ ವರದಿ ಮಾಡಿಕೊಳ್ಳಲು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ.

ವರ್ಗಾವಣೆಗೊಂಡ ಐಎಎಸ್‌ ಅಧಿಕಾರಿಗಳು

ಎಸ್. ಆರ್ ಉಮಾ ಶಂಕರ್ – ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ
ಸೆಲ್ವ ಕುಮಾರ್- ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ
ನವೀನ್ ರಾಜ್ ಸಿಂಗ್- ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ
ಜೆ.ರವಿಶಂಕರ್- ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು
ಡಾ. ರಂದೀಪ್- ಆಯುಕ್ತರು, ಆರೋಗ್ಯ ಇಲಾಖೆ
ಕೆ. ಬಿ. ತ್ರಿಲೋಕ ಚಂದ್ರ- ವಿಶೇಷ ಆಯುಕ್ತರು, ಬಿಬಿಎಂಪಿ
ಕೆ. ಪಿ. ಮೋಹನ್ ರಾಜ್- ಎಂಡಿ, ಕೆಎಸ್‌ಐಐಡಿಸಿ
ಬಿ. ಬಿ. ಕಾವೇರಿ- ಎಂಡಿ, ಕೆಎಸ್‌ಎಂಸಿಎಲ್
ಟಿ. ಹೆಚ್. ಎಂ. ಕುಮಾರ್- ಆಯುಕ್ತರು, ಜವಳಿ ಇಲಾಖೆ
ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ನಿರ್ದೇಶಕರು
ವೆಂಕಟೇಶ್ ಕುಮಾರ್- ಕಾರ್ಯದರ್ಶಿ, ಕೆಕೆಆರ್‌ಡಿಬಿ
ಚಾರುಲತಾ ಸೋಮಲ್- ಜಿಲ್ಲಾಧಿಕಾರಿ, ರಾಯಚೂರು
ಶಿಲ್ಪಾನಾಗ್- ಆಯುಕ್ತರು, ಪಂಚಾಯತ್ ರಾಜ್ ಇಲಾಖೆ
ಬಿ. ಹೆಚ್. ನಾರಾಯಣ ರಾವ್- ಸಿಇಒ, ವಿಜಯನಗರ ಜಿ.ಪಂ
ಬಿ. ಸಿ. ಸತೀಶ್‌- ಕೊಡಗು ಜಿಲ್ಲಾಧಿಕಾರಿ
ಹೆಚ್‌. ಎನ್. ಗೋಪಾಲ ಕೃಷ್ಣ- ಎಂಡಿ, ಕೆಪಿಎಲ್‌ಸಿಎಲ್‌
ಶಿವಾನಂದ- ಆಹಾರ ನಿಗಮದ ಎಂಡಿ

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

ಐಎಫ್‍ಎಸ್: ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಯೋಜನೆ)-ಸುಭಾಶ್ ಕೆ.ಮಲ್ಕೇಡೆ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮಹಾನಿರ್ದೇಶಕ(ಇಎಂಪಿಆರ್‍ಐ)-ಜಗ್ಮೋಹನ್ ಶರ್ಮಾ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ)-ಕುಮಾರ್ ಪುಷ್ಕರ್.
ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಮನೋಜ್ ಕುಮಾರ್, ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಮನೋಜ್ ಕುಮಾರ್ ತ್ರಿಪಾಠಿ, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಉಪೇಂದ್ರ ಪ್ರತಾಪ್ ಸಿಂಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಂಶೋಧನೆ)ಯಾಗಿ ಆರ್.ರವಿಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement