ಹುಬ್ಬಳ್ಳಿ: ಬೆಲ್ಟ್ ನಲ್ಲಿ ಸಾಗಿಸುತ್ತಿದ್ದ 38.50 ಲಕ್ಷ ರೂ. ಮೌಲ್ಯದ ಚಿನ್ನ ವಶ

ಹುಬ್ಬಳ್ಳಿ: ಬೆಲ್ಟ್ ನಲ್ಲಿ ಸುಮಾರು 38.50 ಲಕ್ಷ ರೂ.ಗಳ ಮೌಲ್ಯದ ಚಿನ್ನ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖದೀಮನನ್ನು ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 804.1 ಗ್ರಾಂ ಚಿನ್ನವನ್ನು ಬೆಲ್ಟ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.ಚೇತನ ದೇವೆಂದ್ರಪ್ಪ ಜನ್ನುಎಂಬಾತನೇ ಬಂಧೀತ ವ್ಯಕ್ತಿ.
ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ್ ನೇತೃತ್ವದ ಅನಿಲ ಹುಗ್ಗಿ, ಸಂತೋಷ ಇಚ್ಚಂಗಿ ಮುಂತಾದವರ ತಂಡ ಗಿರಣಿಚಾಳ ಬಳಿಯ ಏಳು ಮಕ್ಕಳ ತಾಯಿಯ ಗುಡಿಯ ಹಿಂಭಾಗದಲ್ಲಿ ವಶಕ್ಕೆ ಪಡೆದಿದ್ದಾರೆ. ಚಿನ್ನವನ್ನು ಜಪ್ತಿ ಮಾಡಿದ ಸಿಸಿಬಿ ಅಧಿಕಾರಿಗಳು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇದು ಇತ್ತೀಚಿನ ವರ್ಷಗಳಲ್ಲಿ ಕಮಿಷನರೇಟ್‌ ವ್ಯಾಪ್ತಿಯಲ್ಲಿನ ದೊಡ್ಡ ಚಿನ್ನದ ಬೇಟೆಯಾಗಿದೆ.

0 / 5. 0

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ನಿಮ್ಮ ಕಾಮೆಂಟ್ ಬರೆಯಿರಿ

advertisement