ಕಲ್ಲಿದ್ದಲು ಕೊರತೆ: ರಾಯಚೂರು ಆರ್ ಟಿಪಿಎಸ್ 5 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ಬೆಂಗಳೂರು: ಕಲ್ಲಿದ್ದಲು ತೀವ್ರ ಕೊರತೆಯಿಂದಾಗಿ ರಾಯಚೂರಿನ ಐದು ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಡಂಸು ವರದಿಯಾಗಿದೆ.
ರಾಯಚೂರು ಶಕ್ತಿ ನಗರದ ಆರ್ ಟಿಪಿಎಸ್ ಕೇಂದ್ರದಲ್ಲಿ ಕಲ್ಲಿದ್ದಲು ಸಮಸ್ಯೆ ತೀವ್ರವಾಗಿದೆ. ಹೀಗಾಗಿ ನಿನ್ನೆ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ ಬಾಕಿ ಉಳಿದ ನಾಲ್ಕು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಕಲ್ಲಿದ್ದಲು ಕೊರತೆಯಿಂದಾಗಿ ಈಗ ಇನ್ನೂ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಆರ್ ಟಿಎಸ್ ನಲ್ಲಿ ಒಟ್ಟು ಎಂಟು ಘಟಕಗಳಿದ್ದು, 1760 ಮೆ.ವಾ. ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈಗ ಎಂಟು ಘಟಕಗಳ ಪೈಕಿ 2,4,6 ಘಟಕಗಳಿಂದ 490 ಮೆ.ವಾ.ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನುಳಿದ 1,3,5,7,8 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement