ಕರ್ನಾಟಕದಲ್ಲಿ ಗುರುವಾರ 310 ಹೊಸ ಕೊವಿಡ್ ಪ್ರಕರಣಗಳು, 6 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು (ಗುರುವಾರ) 310 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ 6 ಮಂದಿ ಸಾವಿಗೀಡಾಗಿದ್ದಾರೆ. ಇದೇ ಅವಧಿಯಲ್ಲಿ 347 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಆರೋಗ್ಯ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 29,82,399ಕ್ಕೆ ಏರಿದೆ. ಇಲ್ಲಿಯವರೆಗೆ 29,34,870 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 37, 922 ಮಂದಿ ಕೊವಿಡ್​​ನಿಂದ ಮೃತಪಟ್ಟಿದ್ದಾರೆ. ಹಾಗೂ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9578ಕ್ಕೆ ಇಳಿದಿದೆ.ಖಚಿತ ಪ್ರಕರಣಗಳ ಶೇಕಡಾವಾರು 0.26 ಆಗಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ 1.93 ಆಗಿದೆ.
ಬೆಂಗಳೂರಿನಲ್ಲಿ 148 ಮಂದಿಗೆ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 1248892 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6637 ಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಕೊವಿಡ್ ಪ್ರಕರಣಗಳ ಸಂಖ್ಯೆ
ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿಯಲ್ಲಿ -4, ಬೆಂಗಳೂರು ಗ್ರಾಮಾಂತರ-7, ಬೆಂಗಳೂರು ನಗರ-148, ಬೀದರ್-3, ಚಾಮರಾಜನಗರ-4, ಚಿಕ್ಕಬಳ್ಳಾಪುರ- 1, ಚಿಕ್ಕಮಗಳೂರು-5, ಚಿತ್ರದುರ್ಗ-2, ದಕ್ಷಿಣ ಕನ್ನಡ- 40, ದಾವಣಗೆರೆ-3, ಧಾರವಾಡ-1, ಗದಗ-0, ಹಾಸನ-15, ಹಾವೇರಿ 2, ಕಲಬುರಗಿ-0, ಕೊಡಗು-8, ಕೋಲಾರ-1, ಕೊಪ್ಪಳ -0, ಮಂಡ್ಯ-5, ಮೈಸೂರು- 27, ರಾಯಚೂರು-1, ರಾಮನಗರ-0, ಶಿವಮೊಗ್ಗ-4, ತುಮಕೂರು-8, ಉಡುಪಿ-7, ಉತ್ತರ ಕನ್ನಡ- 10, ವಿಜಯಪುರ-0 ಯಾದಗಿರಿ-0

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement