ಲಖೀಂಪುರ ಖೇರಿ ಹಿಂಸಾಚಾರ: ಎಸ್ಐಟಿಯಿಂದ ಘಟನೆ ಮರುಸೃಷ್ಟಿ; ಕೇಂದ್ರ ಸಚಿವರ ಪುತ್ರನನ್ನು ಸ್ಥಳಕ್ಕೆ ಕರೆದೊಯ್ದ ಅಧಿಕಾರಿಗಳು

ಲಖಿಂಪುರ ಖೇರಿ: ಲಿಖಿಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗುರುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಮತ್ತು ಇನ್ನಿತರ ಮೂವರನ್ನು ಉತ್ತರ ಪ್ರದೇಶದ ತಿಕೋನಿಯಾ ಗ್ರಾಮಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿಸಿದೆ.
ಬಿಗಿ ಭದ್ರತೆಯ ನಡುವೆ ಮೂವರು ಆರೋಪಿಗಳನ್ನು ಲಖಿಂಪುರ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ತಿಕೊನಿಯಾ-ಬನ್ಬೀರ್‌ಪುರ ರಸ್ತೆಯಲ್ಲಿರುವ ಘಟನಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಬಳಿಕ ಘಟನೆಯನ್ನು ಮರುಸೃಷ್ಟಿ ಮಾಡಲಾಯಿತು.
ಇದಕ್ಕಾಗಿ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದ ತಂಡ, ಎಲ್ಲಿ ಏನು ನಡೆಯಿತು ಎಂದು ಆರೋಪಿಗಳಿಂದಲೇ ಮಾಹಿತಿ ಪಡೆಯುವ ಕಾರ್ಯಕ್ಕೆ ಮುಂದಾಗಿದೆ. ನಾಲ್ವರು ಪ್ರಮುಖ ಆರೋಪಿಗಳ ಪೈಕಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನೂ ಸೇರಿದ್ದಾನೆ.
ಅಕ್ಟೋಬರ್ 3ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ವಾಹನವನ್ನು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಹಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಇದ್ದರು ಎನ್ನಲಾಗಿದೆ.
ಆಕ್ರೋಶಗೊಂಡ ರೈತರು ವಾಹನದಲ್ಲಿದ್ದ ಕೆಲವರನ್ನು ಹೊಡೆದರು ಎಂದು ಆರೋಪಿಸಲಾಗಿದೆ. ಮೃತರಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಚಾಲಕ ಸೇರಿದ್ದಾರೆ. ಘಟನೆಯಲ್ಲಿ ಓರ್ವ ಪತ್ರಕರ್ತ ಕೂಡ ಮೃತಪಟ್ಟಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ವಾಹನದಲ್ಲಿ ಇದ್ದರು ಎಂದು ರೈತರು ಆರೋಪಿಸಿದ್ದರು.
ಅಕ್ಟೋಬರ್ 9ರಂದು 12 ತಾಸಿನ ಸುದೀರ್ಘ ವಿಚಾರಣೆಯ ಬಳಿಕ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು. ಅಕ್ಟೋಬರ್ 12ರಿಂದ 15ರ ವರೆಗೆ ಪೊಲೀಸ್ ಕಸ್ಟಡಿಗೆ ರವಾನಿಸಲಾಗಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement