ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಪುನರಾಯ್ಕೆ

ನ್ಯೂಯಾರ್ಕ್: 2022-24ರ ಅವಧಿಯ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಗುರುವಾರ ಮರು ಆಯ್ಕೆಯಾಗಿದೆ.
ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ (2022-24) 6ನೇ ಅವಧಿಗೆ ಭಾರೀ ಬಹುಮತದಿಂದ ಆಯ್ಕೆಯಾಗಿದೆ. ಭಾರತದ ಮೇಲೆ ವಿಶ್ವಾಸವನ್ನು ಮತ್ತೊಮ್ಮೆ ತೋರಿದ್ದಕ್ಕಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು. ವಿಶ್ವದಲ್ಲಿ ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಹಾಗೂ ಪ್ರೋತ್ಸಾಹಕ್ಕೆ ಶ್ರಮಿಸುತ್ತೇವೆ’ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ಟ್ವೀಟ್ ಮೂಲಕ ತಿಳಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗುಪ್ತಮತದಾನದ ಮೂಲಕ ಅರ್ಜಂಟೀನಾ, ಬೆನಿನ್, ಕ್ಯಾಮರೂನ್, ಎರಿಟ್ರಿಯಾ, ಫಿನ್​ಲೆಂಡ್, ಗ್ಯಾಂಬಿಯಾ, ಹೌಂಡರಸ್, ಭಾರತ, ಕಜಕಸ್ತಾನ್, ಲಿಥುನಿಯಾ, ಲಕ್ಸಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರುಗ್ವೆ, ಕತಾರ್, ಸೊಮಾಲಿಯಾ, ಯುಎಇ ಮತ್ತು ಅಮೆರಿಕ ದೇಶಗಳನ್ನು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆ ಮಾಡಿದೆ.

0 / 5. 0

ಪ್ರಮುಖ ಸುದ್ದಿ :-   ಬೆಳಗಿನ ವಾಕಿಂಗ್‌ ವೇಳೆ ಕುಸಿದುಬಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ ಧನಕರ್‌; ದೆಹಲಿ ಏಮ್ಸ್‌ಗೆ ದಾಖಲು

ನಿಮ್ಮ ಕಾಮೆಂಟ್ ಬರೆಯಿರಿ

advertisement