ಸಿಂಘು ಗಡಿ ಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಸರಬ್ಜಿತ್ ಸಿಂಗ್

ನವದೆಹಲಿ:ನಿಹಾಂಗ್ ಸಮುದಾಯಕ್ಕೆ ಸೇರಿದ ಸರಬ್ಜಿತ್ ಸಿಂಗ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದು, ದೆಹಲಿ-ಹರಿಯಾಣ ಗಡಿ ಸಮೀಪದ ಕುಂಡ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಜವಾಬ್ದಾರಿಯನ್ನು ಈತ ಹೊತ್ತುಕೊಂಡಿದ್ದಾನೆ.
ಸರಬ್ಜಿತ್ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿವರಗಳ ಪ್ರಕಾರ, ಅವರನ್ನು ಶನಿವಾರ (ನಾಳೆ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
.35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಒಂದು ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದ ಶವ ಶುಕ್ರವಾರ ಬೆಳಿಗ್ಗೆ ದೆಹಲಿಯ ಸಿಂಗು ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನನ್ನು ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಲಖ್ಬೀರ್ ದಲಿತ ಸಮುದಾಯಕ್ಕೆ ಸೇರಿದವನು ಮತ್ತು ಯಾವುದೇ ಅಪರಾಧದ ಹಿನ್ನೆಲೆ ಅಥವಾ ರಾಜಕೀಯ ಸಂಬಂಧ ಹೊಂದಿಲ್ಲ.
ಲಖ್ಬೀರ್‌ ಸಿಂಗ್ ಪಂಜಾಬ್ ನ ತಾರ್ನ್ ತರನ್ ನ ಚೀಮಾ ಖುರ್ದ್ ಹಳ್ಳಿಯ ನಿವಾಸಿಯಾಗಿದ್ದು, ಅವರು ಪತ್ನಿ ಜಸ್ಪ್ರೀತ್ ಕೌರ್ ಮತ್ತು 8, 10 ಮತ್ತು 12 ವರ್ಷದ ಮೂವರು ಮಕ್ಕಳನ್ನು ಅಗಲಿದ್ದಾರೆ.
ಹತ್ಯೆಯ ಜವಾಬ್ದಾರಿ ಹೊತ್ತುಕೊಂಡ ನಿಹಾಂಗ್ ಗುಂಪು
ನಿಹಾಂಗ್ ಗುಂಪು, ನಿರ್ವೈರ್ ಖಾಲ್ಸಾ-ಉದ್ನಾ ದಲ್, ಶುಕ್ರವಾರ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದೆ. ಕಳೆದ 10 ತಿಂಗಳಿಂದ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೃಷಿ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದ ಬಳಿ ಶವ ಪತ್ತೆಯಾಗಿದೆ.ಸಂಯುಕ್ತ ಕಿಸಾನ್ ಮೋರ್ಚಾ (SKM), ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡುವ ಜಾಗದಲ್ಲಿ ಗ್ರಂಥವನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ನಂತರ ನಿಹಾಂಗ್ಸ್ ಗುಂಪು ಕ್ರೂರ ಹತ್ಯೆಯ ಹೊಣೆ ಹೊತ್ತಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement