ನಾನು ಕಬಡ್ಡಿ ಆಡಿದ್ದು ವಿಡಿಯೊ ಮಾಡಿದವರು ರಾವಣರು: ಸಾದ್ವಿ ಪ್ರಜ್ಞಾ

ಭೋಪಾಲ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿರುವ ಭೋಪಾಲ ಸಂಸದೆ, ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊ ಚಿತ್ರೀಕರಿಸಿ, ಹರಿಬಿಟ್ಟವರನ್ನು ರಾವಣರು ಎಂದು ಹೇಳಿರುವ ಸಂಸದೆ ಪ್ರಜ್ಞಾ, ಹಾಗೆ ಮಾಡಿದವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸಹಾಕಯರ ನೆರವಿನೊಂದಿಗೆ, ದೀರ್ಘ ಕಾಲದಿಂದಲೂ ವ್ಹೀಲ್‌ ಚೇರ್‌ ಮೇಲೆ ಕುಳಿತೇ ಸಂಚರಿಸುವ ಪ್ರಜ್ಞಾ ಅವರು ಕಬಡ್ಡಿ ಆಡುತ್ತಿರುವ ವಿಡಿಯೊ ಅಚ್ಚರಿಗೆ ಕಾರಣವಾಘಿತ್ತು. ಇದಕ್ಕೂ ಮೊದಲು ಅವರು ಬಾಸ್ಕೆಟ್‌ ಬಾಲ್‌ ಆಡಿದ ವಿಡಿಯೊ ವಿಡಿಯೊ ವೈರಲ್‌ ಆಗಿತ್ತು.
ಭೋಪಾಲದ ಸಿಂಧಿ ಸಮುದಾಯ ಹೆಚ್ಚಿರುವ ಸಂತ ನಗರ (ಬೈರಗಢ) ದಲ್ಲಿ ಶುಕ್ರವಾರ ರಾತ್ರಿ ದಸರಾ ಕಾರ್ಯಕ್ರಮದಲ್ಲಿ ಪ್ರಜ್ಞಾ ಮಾತನಾಡಿದರು. ‘ನಾನು ಎರಡು ದಿನಗಳ ಹಿಂದೆ (ದುರ್ಗಾ ಪಂಡಲ್‌ನಲ್ಲಿ) ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕ್ರೀಡಾಪಟುಗಳು ಕಬಡ್ಡಿ ರೈಡ್‌ ಮಾಡುವಂತೆ ನನ್ನಲ್ಲಿ ವಿನಂತಿಸಿದರು. ಈ ಸನ್ನಿವೇಶದ ಒಂದು ಚಿಕ್ಕ ತುಣುಕು ಸೆರೆಹಿಡಿದು ಮಾಧ್ಯಮಗಳಲ್ಲಿ ತೋರಿಸಲಾಯಿತು’ ಎಂದು ಅವರು ಹೇಳಿದ್ದಾರೆ.
ಯಾರಾದರೂ ಅಸಮಾಧಾನಗೊಂಡಿದ್ದರೆ ಮತ್ತು ಸಿಟ್ಟಾಗಿದ್ದರೆ, ಆ ವ್ಯಕ್ತಿ ನಿಮ್ಮ ನಡುವೆ ಇರುವ ರಾವಣ ಎಂದರ್ಥ. ಸಿಂಧಿ ಸಹೋದರರಲ್ಲಿ ಅಂತಹ ಒಬ್ಬ ವ್ಯಕ್ತಿ ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಾಗಿ ನೋಡುತ್ತಿದ್ದಾರೆ. ಯಾಕೆ ಎಂಬುದು ನನಗೆ ಗೊತ್ತಿಲ್ಲ. ಆ ವ್ಯಕ್ತಿಯಿಂದ ಯಾವ ಅಮೂಲ್ಯವಾದ ವಸ್ತುವನ್ನು ನಾನು ಕಸಿದುಕೊಂಡಿದ್ದೇನೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಂಸ್ಕಾರ ಹಾಳಾಗಿರುವವರಿಗೆ ಅವರು ಸರಿಹೋಗಲು ಹೇಳುತ್ತಿದ್ದೇನೆ. ದೇಶಭಕ್ತರು, ಕ್ರಾಂತಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂತರೊಡನೆ ಸಂಘರ್ಷಕ್ಕಿಳಿದರೆ ಅವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗಿ ಹೋಗುತ್ತದೆ. ರಾವಣ, ಕಂಸರು ಉಳಿದರೇ? ಈಗಿನ ಅಧರ್ಮಿ, ವಿಧರ್ಮಿಗಳೂ ಉಳಿಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement