ಮೊಬೈಲ್ ಕೊಡದ್ದಕ್ಕೆ ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ..!

ಮುಂಬೈ: ಕೆಲವು ಘಟನೆಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಆ ರೀತಿಯ ವಿಚಿತ್ರವಾದ ಘಟನೆಯೊಂದು ಮಹಾರಾಷ್ಟ್ರದ ಭಾಂದರದ ಮಸಲ್​ನಲ್ಲಿ ಗಂಡ ತನ್ನ ಮೊಬೈಲ್​ ಅನ್ನು ವಾಪಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ತನ್ನ ಗಂಡನ ತುಟಿಯನ್ನೇ ಕತ್ತರಿಸಿದ್ದಾಳೆ!
ಮಸಲ್​ನಲ್ಲಿ 40 ವರ್ಷದ ಖೇಮ್​ರಾಜ್ ಬಾಬೂರಾವ್ ಮುಲ್ ಎಂಬ ವ್ಯಕ್ತಿ ಭಾಂದರದಲ್ಲಿ ವಾಸವಾಗಿದ್ದರು. ತನ್ನ ಮೊಬೈಲ್ ಹಾಳಾಗಿದ್ದರಿಂದ ಮನೆಯಲ್ಲಿದ್ದಾಗ ತನ್ನ ಹೆಂಡತಿಯ ಮೊಬೈಲ್ ಬಳಸುತ್ತಿದ್ದರು. ತನ್ನ ಮೊಬೈಲನ್ನು ಯಾವಾಗಲೂ ಗಂಡನೇ ಹಿಡಿದುಕೊಂಡಿರುತ್ತಾನೆ ಎಂದು ಕೋಪಗೊಂಡ ಹೆಂಡತಿ ಆತನೊಂದಿಗೆ ಜಗಳವಾಡಿದ್ದಾರೆ.
ಹಾಗೂ ಮೊಬೈಲ್ ವಾಪಸ್ ಕೊಡುವಂತೆ ಕೇಳಿದ್ದಾಳೆ. ಅದಕ್ಕೆ ಗಂಡ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆಕೆ ಗಂಡನ ತುಟಿಯನ್ನು ಚಾಕುವಿ​ನಿಂದ ಕತ್ತರಿಸಿದ್ದಾಳೆ. ಆಕೆ ಚಾಕುವನ್ನು ಸಿಟ್ಟಿನಿಂದ ಗಂಡನ ಮುಖದ ಮೇಲೆ ಎಸೆದಾಗ ಆ ಚಾಕು ಆತನ ತುಟಿಗೆ ತಾಗಿ ತುಟಿ ಕತ್ತರಿಸಿಹೋಗಿದೆ ಎನ್ನಲಾಗಿದೆ.
ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ಮೇಲೆ ಹಲ್ಲೆ ಮಾಡಿದ ಹೆಂಡತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement