ಕಾಶ್ಮೀರದ ಕುಲ್ಗಾಂನಲ್ಲಿ ಮತ್ತೆ ಇಬ್ಬರು ಸ್ಥಳೀಯೇತರ ಕಾರ್ಮಿಕರ ಗುಂಡಿಕ್ಕಿ ಹತ್ಯೆ ಮಾಡಿದ ಭಯೋತ್ಪಾಕರು, ಎರಡು ದಿನಗಳಲ್ಲಿ ಮೂರನೇ ದಾಳಿ

ಕುಲಗಂ: : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಭಯೋತ್ಪಾದಕರು ಇಬ್ಬರು ಸ್ಥಳೀಯೇತರ ಕಾರ್ಮಿಕರನ್ನು ಗುಂಡು ಹೊಡೆದು ಕೊಂದಿದ್ದು, ಮತ್ತೊಬ್ಬನನ್ನು ಗಾಯಗೊಳಿಸಿದ್ದಾರೆ.
ಕಾಶ್ಮೀರದಲ್ಲಿ ಕಳೆದ 15 ದಿನಗಳಲ್ಲಿ 11 ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕುಲ್ಗಾಂನ ಲಾರಾನ್ ಗಂಗಿಪೋರ ವನ್ಪೋಹ್ ನಲ್ಲಿ ಕಾರ್ಮಿಕರ ಬಾಡಿಗೆ ವಸತಿಗೃಹ ಪ್ರವೇಶಿಸದ ಬಂದೂಕುಧಾರಿಗಳು ಪ್ರವೇಶಿಸಿದರು ಮತ್ತು ಅವರ ಮೇಲೆ ಗುಂಡು ಹಾರಿಸಿದರು. ಮೂಲಗಳ ಪ್ರಕಾರ, ಮೂವರು ಕಾರ್ಮಿಕರಿಗೆ ಬುಲೆಟ್ ಗಾಯಗಳಾಗಿವೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಬಿಹಾರದ ನಿವಾಸಿಗಳಾದ ರಾಜಾ ರೇಶಿ ದೇವ್ ಮತ್ತು ಜೋಗಿಂದರ್ ರೇಶಿ ದೇವ್ ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಚುನ್ ಚುನ್ ರೇಶಿ ದೇವ್ ಎಂದು ಗುರುತಿಸಲಾಗಿದೆ.
ನಾವು ನಮ್ಮ ಕೋಣೆಯಲ್ಲಿ ಕುಳಿತಿದ್ದಾಗ ನಮ್ಮ ಸಹೋದ್ಯೋಗಿಯೊಬ್ಬರು ಬಂದು ನಮ್ಮ ಮೂವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದರು. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು, ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಅವರನ್ನು (ಕಾರ್ಮಿಕರು) ಭಯೋತ್ಪಾದಕರು ಆರು ಬಾರಿ ಗುಂಡಿ ಹಾರಿಸಿ ಕೊಂದರು. ನಾನು ಕೋಣೆಯೊಳಗಿದ್ದೆ, ಹೀಗಾಗಿ ಎಷ್ಟು ಜನ ಬಂದೂಕುಧಾರಿಗಳಿದ್ದರು ಎಂದು ನನಗೆ ತಿಳಿದಿಲ್ಲ” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.
ಶನಿವಾರ, ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರಪ್ರದೇಶದ ಕಾರ್ಮಿಕರೊಬ್ಬರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಮಾರನೇ ದಿನವಾಧ ಈ ಘಟನೆ ನಡೆದಿದೆ.
ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಶನಿವಾರ ಸಂಜೆ 6.40 ರ ಸುಮಾರಿಗೆ ಮೊದಲ ದಾಳಿ ನಡೆದಿದ್ದು, ಶಂಕಿತ ಭಯೋತ್ಪಾದಕರು 36 ವರ್ಷದ ಅರವಿಂದ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಎರಡನೇ ದಾಳಿ ಪುಲ್ವಾಮಾದ ಲಿಟ್ಟರ್‌ನಲ್ಲಿ ನಡೆದಿದ್ದು, ಶಂಕಿತ ಭಯೋತ್ಪಾದಕರು ಸಗೀರ್ ಅಹ್ಮದ್ ಮೇಲೆ ಗುಂಡು ಹಾರಿಸಿದರು.
ಈ ತಿಂಗಳ ಆರಂಭದಲ್ಲಿ, ಬಿಹಾರದ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಅವರನ್ನು ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು.
ಏತನ್ಮಧ್ಯೆ, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರಾದ ತಪನ್ ದೇಕಾ ಶನಿವಾರ ಶ್ರೀನಗರವನ್ನು ತಲುಪಿದ್ದಾರೆ. ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಯ ನಂತರ ಗೃಹ ಸಚಿವಾಲಯ (MHA) ಅವರನ್ನು ಕಳುಹಿಸಿತು. ಅವರು ಶುಕ್ರವಾರ, ವಿಜಯ ದಶಮಿಯಂದು ಹೊರಟರು, ಆದರೆ ಶನಿವಾರ ಇಬ್ಬರು ಸ್ಥಳೀಯರಲ್ಲದವರ ಹತ್ಯೆಯ ನಂತರ ಮರಳಿ ಬಂದಿದ್ದಾರೆ.
ಶನಿವಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಳೆದ ಒಂಬತ್ತು ದಿನಗಳಲ್ಲಿ ಒಂಬತ್ತು ಎನ್ಕೌಂಟರ್‌ಗಳಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಹದಿಮೂರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement