ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್​ ಅಲಿ ಶಾ ಗೀಲಾನಿ ಮೊಮ್ಮಗ ಸರ್ಕಾರಿ ಹುದ್ದೆಯಿಂದ ವಜಾ

ಶ್ರೀನಗರ: ಪ್ರತ್ಯೇಕತಾವಾದಿ ನಾಯಕ ಮತ್ತು ಹುರಿಯತ್ ಅಧ್ಯಕ್ಷ ಸಯ್ಯದ್ ಅಲಿ ಗಿಲಾನಿ ನಿಧನರಾದ ಒಂದು ತಿಂಗಳ ನಂತರ, ಅವರ ಮೊಮ್ಮಗ ಅನೀಸ್-ಉಲ್-ಇಸ್ಲಾಂ ಅವರನ್ನು ಶನಿವಾರ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.
ಶೇರ್-ಇ-ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್(SKICC) ನಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅನೀಸ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಆಡಳಿತ ವಜಾಗೊಳಿಸಿದೆ. ದೋಡಾದ ಶಿಕ್ಷಕನನ್ನು ಕೂಡ ಸರ್ಕಾರ ವಜಾ ಮಾಡಿದೆ.
ಜಮ್ಮು-ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ತಫ್​ ಅಹ್ಮದ್ ಶಾ ಅಲಿಯಾಸ್​ ಅಲ್ತಫ್ ಫಾಂಟೂಶ್​ ಅವರ ಪುತ್ರ ಅನೀಸ್​ ಉಲ್​ ಇಸ್ಲಾಮ್​ ಸರ್ಕಾರಿ ಸ್ವಾಮ್ಯದ ಕನ್ವೆನ್ಶನ್​ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದಾಗಿನಂದಲೂ ಅವರು ಈ ಹುದ್ದೆಯಲ್ಲಿ ಇದ್ದರು. ಇದೀಗ ಸಂವಿಧಾನದ ಕಲಂ 311 (2) (ಸಿ) ಅಡಿಯಲ್ಲಿ ಬರುವ ವಿಶೇಷ ನಿಬಂಧನೆಗಳ ಅನುಸಾರ ಅವರನ್ನು ವಜಾಗೊಳಿಸಲಾಗಿದೆ.
ಗೀಲಾನಿ ಕಳೆದ ಸೆಪ್ಟೆಂಬರ್​​ನಲ್ಲಿ ಮೃತಪಟ್ಟಿದ್ದಾರೆ. ಅವರು 30 ವರ್ಷಗಳಿಂದ ಕಾಶ್ಮೀರ ಪ್ರತ್ಯೇಕತಾವಾದ ಹೋರಾಟಗಾರರಾಗಿದ್ದರು. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದರು. ಅವರು ಮೃತಪಟ್ಟಾಗ ಮೃತದೇಹದ ಮೇಲೆ ಕುಟುಂಬಸ್ಥರು ಪಾಕಿಸ್ತಾನದ ಧ್ವಜ ಹೊದೆಸಿದ್ದು ವಿವಾದ ಸೃಷ್ಟಿಸಿತ್ತು. ಕುಟುಂಬಸ್ಥರ ವಿರುದ್ಧ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement