ಪ್ರೀತಿಸಿ ಮದುವೆಯಾದವಳ ಕೊಂದು ಅವಳ ಚಿನ್ನಾಭರಣದೊಂದಿಗೆ ಠಾಣೆಗೆ ಬಂದು ಶರಣಾದ ಆರೋಪಿ

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಪತ್ನಿಯ ಶೀಲ ಶಂಕಿಸಿದ ಗಂಡ ಆಕೆಯ ಕೊಲೆ ಮಾಡಿದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಅಲ್ಲದೆ, ಕೊಲೆ ಮಾಡಿದ ನಂತರ ಪತ್ನಿಯ ಮೈಮೇಲಿದ್ದ ಒಡವೆಗಳೊಂದಿಗೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.
ಆಯನೂರು ಮೂಲದ 21 ವರ್ಷದ ಫಿಜಾ ಕೌಸರ್ (21) ಎಂಬವಳು ಪತಿಯಿಂದಲೇ ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.
ಆಯನೂರಿನಿಂದ ಶಿವಮೊಗ್ಗಕ್ಕೆ‌ ಕಾಲೇಜಿಗೆ ಬರುತ್ತಿದ್ದ ಫಿಜಾ ಕೌಸರ್​​ಳನ್ನು ಶೋಯೆಬ್ ಪ್ರೀತಿಸಿದ್ದ. ಕೌಸರ್‌ ತನ್ನ ಮನೆಯವರ ವಿರೋಧದ ನಡುವೆಯೂ ಸುಮಾರು ಎರಡು ವರ್ಷಗಳ ಹಿಂದೆ ಶೋಯೆಬ್‌ನನ್ನು ಮದುವೆಯಾಗಿದ್ದಳು. ಆದರೆ ಶೋಯೆಬ್‌ ಇತ್ತೀಚಿಗೆ ಪತ್ನಿಗೆ ಬೇರೊಬ್ಬರ ಜೊತೆ ಸಂಬಂಧ ಇದೆ ಎಂದು ಅನುಮಾನಪಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಒಂದು ವಾರದ ಹಿಂದೆ ಗಂಡನೊಂದಿಗೆ ಜಗಳ ಮಾಡಿಕೊಂಡು ಕೌಸರ್ ತವರು ಮನೆಗೆ ಹೋಗಿದ್ದಳು. ನಿನ್ನೆ ಕಂಪ್ಯೂಟರ್ ಕ್ಲಾಸಿಗೆಂದು ಶಿವಮೊಗ್ಗಕ್ಕೆ ಬಂದಿದ್ದ‌ ಅವಳನ್ನು ಆಟೋದಲ್ಲಿ ವಾಸು ಸತ್ಯ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ .ಕ ಪತ್ನಿಯನ್ನು ಕೊಲೆ‌ ಮಾಡಿದ ಬಳಿಕ ಆಕೆಯ ಮೈಮೇಲಿದ್ದ ಒಡವೆಗಳನ್ನು ತೆಗೆದುಕೊಂಡು, ಸೀದಾ ತುಂಗಾ ನಗರ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗದ ಅನುಪಿನಕಟ್ಟೆ ಸಮೀಪದ ವಾಸುಸತ್ಯ ಬಡಾವಣೆಯಲ್ಲಿ ಈ ಘಟನೆ‌ ನಡೆದಿದ್ದು, ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement