ಹೊನ್ನಾವರ : ತಾಲೂಕಿನ ಹಳದೀಪುರದ ನವಿಲಗೋಣ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾರಿಗೆ ಬಸ್ -ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ ವರದಿಯಾಗಿದೆ.
ಸಾರಿಗೆ ಇಲಾಖೆಯ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮೃತಪಟ್ಟಿದ್ದು ಬೈಕ್ ನುಜ್ಜುಗುಜ್ಜಾಗಿದೆ. ಮೃತ ಬೈಕ್ ಸವಾರನನ್ನು ಸಂಕೊಳ್ಳಿಯ ಗಣಪತಿ ಅನಂತ ನಾಯ್ಕ (77) ಎಂದು ಗುರುತಿಸಲಾಗಿದೆ.
ಬೈಕ್ ಸವಾರ ರಾಷ್ಟ್ರೀಯ ಹೆದ್ದಾರಿಯಿಂದ ಒಳ ರಸ್ತೆಗೆ ಹೊರಳುವ ಯತ್ನದಲ್ಲಿದ್ದಾಗ ಎದುರಿನಿಂದ ವೇಗವಾಗಿ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು, ಆದರೆ ಮಾರ್ಗಮಧ್ಯೆ ಮೃತಪಟ್ಟ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ