ಜೆಎಸ್ಎಸ್ ನೂತನ ಆಡಳಿತ ಮಂಡಳಿಯ ೪೮ ವರ್ಷಗಳ ಸಾರ್ಥಕ-ಪ್ರಾಮಾಣಿಕ ಸೇವೆಯಿಂದ ಸಂಸ್ಥೆಈಗ ಹೆಮ್ಮರ: ಡಾ. ನ. ವಜ್ರಕುಮಾರ

ಧಾರವಾಡ: ಉತ್ತರ ಕರ್ನಾಟಕದ ಶಿಕ್ಷಣದ ಹೆಬ್ಬಾಗಿಲಾಗಿರುವ ಧಾರವಾಡಕ್ಕೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನತಾ ಶಿಕ್ಷಣ ಸಮಿತಿಯ ಸಾರಥ್ಯವನ್ನು ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು.
ಅವರು ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ೪೮ ವರ್ಷಗಳನ್ನು ಪೂರೈಸಿ ೪೯ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಜೆ.ಎಸ್.ಎಸ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
೧೯೭೨ ರಲ್ಲಿ ವಹಿಸಿಕೊಂಡಾಗ, ಸಮಿತಿ ಆರ್ಥಿಕ ಸಂಕಷ್ಟದಲ್ಲಿತ್ತು. ಕೇವಲ ೧೮೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಜೆ.ಎಸ್.ಎಸ್ ಸಂಸ್ಥೆಯನ್ನು ಪೂಜ್ಯರ ನೇತೃತ್ವದಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ೪೮ ವರ್ಷಗಳು ತುಂಬಿ ೪೯ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಅಗಾಧ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಉಡುಪಿಯ ಪೇಜಾವರ ಮಠಾಧೀಶರ ಆಶೀರ್ವಾದ, ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಕಾರಣ ಎಂದು ಹೇಳಿದರು.
ವಿತ್ತಾಧಿಕಾರಿಗಳಾದ ಡಾ ಅಜಿತ್ ಪ್ರಸಾದ ಮಾತನಾಡಿ, ೧೯೪೪ ರಲ್ಲ್ಲಿ ಸ್ಥಾಪನೆಯಾದ ಜನತಾ ಶಿಕ್ಷಣ ಸಮಿತಿ ೧೯೭೩ ಅಕ್ಟೋಬರ್ ೧೮ ರಂದು ನೂತನ ಆಡಳಿತ ಮಂಡಳಿಗೆ ಹಸ್ತಾಂತರವಾಯಿತು. ಇದೀಗ ಈ ಸಂಸ್ಥೆಯಲ್ಲಿ ೧೮,೦೦೦ ವಿದ್ಯಾರ್ಥಿಗಳು ಕೆ.ಜಿ ಯಿಂದ ಪಿ.ಜಿ ವರೆಗೆ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಡಾ.ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿ, ವಜ್ರಕುಮಾರವರ ದಣಿವರಿಯದ ಶ್ರಮ, ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿತು. ಈಗ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ರಾಜ್ಯದ ಉತ್ಕೃಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ಇದರೊಟ್ಟಿಗೆ ಪೂಜ್ಯರ ದೂರದೃಷ್ಟಿ ಫಲವಾಗಿ ಎಸ್.ಡಿ.ಎಂ ಸಂಸ್ಥೆಗಳು ಸಹ ಧಾರವಾಡದಲ್ಲಿ ಪ್ರಾರಂಭವಾದವು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುತ್ತಿದ್ದಾರೆ. ಕಳೆದ ೪೮ ವರ್ಷಗಳಿಂದ ಡಾ. ನ. ವಜ್ರಕುಮಾರ ಅವರು ತಮ್ಮ ಅವಿರತ ಪ್ರಯತ್ನದಿಂದ ಈ ಸಂಸ್ಥೆಯನ್ನು ಒಂದು ಕುಟುಂಬವಾಗಿ ಮುನ್ನಡೆಸುತ್ತಿದ್ದಾರೆ. ೧೯೭೩ ರಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಜೆ.ಎಸ್.ಎಸ್ ಇದೀಗ ಕೋವಿಡ್ ಸಮಯದಲ್ಲಿ ತನ್ನ ಎಲ್ಲ ಸಿಬ್ಬಂದಿಗೆ ಯಾವುದೇ ವೇತನ ಕಡಿತ ಮಾಡದೆ ನಿಗದಿತ ದಿನದಂದೇ ವೇತನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜೆ.ಎಸ್.ಎಸ್ ನಡೆದು ಬಂದ ದಾರಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ೪೮ ವರ್ಷಗಳ ಕಾಲ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾಗಿ ಈ ಸಂಸ್ಥೆ ಅಭಿವೃದ್ಧಿ ಕಾರಣರಾದ ಡಾ. ನ. ವಜ್ರಕುಮಾರವರನ್ನು ಹಾಗೂ ಡಾ. ಅಜಿತ ಪ್ರಸಾದರವರನ್ನು ಜೆ.ಎಸ್.ಎಸ್ ಅಂಗಸಂಸ್ಥೆಗಳ ಮುಖ್ಯಸ್ಥರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜೆ.ಎಸ್.ಎಸ್ ಆರ್ಥಿಕ ಹಾಗೂ ಜನಸಂಖ್ಯಾ ಸಂಶೋಧನಾ ಕೇಂದ್ರದವರು ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಹಾವೀರ ಉಪಾಧ್ಯೆ ಕಾರ್ಯಕ್ರಮ ನಿರೂಪಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಜ್ಯೋತಿ ಹಳ್ಳದ ಸ್ವಾಗತಿಸಿದರು. ವಿ.ಎನ್.ದೇಸಾಯಿ ವಂದಿಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement