ಬೆಳಗಾವಿ: ರಾಜಹಂಸಘಡದಲ್ಲಿ ಯುವಕರಿಬ್ಬರು ನೀರು ಪಾಲು

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿ ನಡೆದ ಬಗ್ಗೆ ವರದಿಯಾಗಿದೆ.
ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ.
ಫೋಟೋ ಶೂಟ್​ಗೆಂದು ರಾಜಹಂಸಘಡ ಕೋಟೆಗೆ ಹೋಗಿದ್ದರು. ನಂತರ ಬರುವಾಗ ಕೋಟೆಯ ಪಕ್ಕದಲ್ಲಿದ್ದ ಕಲ್ಲಿನ ಕ್ವಾರಿಯಲ್ಲಿ ಈಜುವುದಕ್ಕಾಗಿ ಮೂವರು ನೀರಿಗೆ ಇಳಿದಿದ್ದರು. ಅದರಲ್ಲಿ ಒಬ್ಬ ಯುವಕ ದಡ ಸೇರಿ ಪಾರಾಗಿದ್ದಾನೆ. ಇನ್ನಿಬ್ಬರು ಮೃತಪಟ್ಟಿದ್ದಾರೆ. ನಿನ್ನೆ (ಅಕ್ಟೋಬರ್ 17) ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಡಿಆರ್‌ಎಫ್ ತಂಡ ಮೃತದೇಹ ಪತ್ತೆ ಮಾಡಿದೆ. ಈ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement