ಹಿರಿಯ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ: ಜನತೆ ಕಂಬನಿ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸಜ್ಜನ ರಾಜಕಾರಣಿ, ಶಿಕ್ಷಣ ಪ್ರೇಮಿ, ಖ್ಯಾತ ವೈದ್ಯರಾಗಿದ್ದ ಹೊನ್ನಾವರದ ಕರ್ಕಿಯ ಡಾ.ಎಂ.ಪಿ.ಕರ್ಕಿ(೮೭) ಸೋಮವಾರ ಸಂಜೆ ನಿಧನರಾದ ಸುದ್ದಿ ತಿಳಿಯುತ್ತಿರುವಂತೆ ಜನರು ಕಣ್ಣೀರು ಮಿಡಿದರು.
ಜನಸಂಘದ ಮೂಲಕ ರಾಜಕೀಯಕ್ಕೆ ಬಂದ ಡಾ.ಎಂ.ಪಿ.ಕರ್ಕಿ ನಂತರ ಬಿಜೆಪಿಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ೧೯೮೩ ಮತ್ತು ೧೯೯೪ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನೋಪಯೋಗಿ ಕಾರ್ಯದ ಮೂಲಕ ಇಂದಿಗೂ ಜನರ ಮನದಲ್ಲಿ ಪ್ರೀತಿಯ ವ್ಯಕ್ತಿಯಾಗಿದ್ದಾರೆ.
ಕುಮಟಾ-ಹೊನ್ನಾವರ ಪಟ್ಟಣ ದಲ್ಲಿ ಕುಡಿಯಲು ನೀರಿಲ್ಲದೆ ಪರದಾಡುತ್ತಿರುವಾಗ ಮರಾಕಲ್ ಯೋಜನೆ ಮೂಲಕ ಜನರ ದಾಹ ತೀರಿಸಿ ಜನಮನದಲ್ಲಿ ಅಚ್ಚಳಿಯದೆ ಉಳಿದ ಅಪರೂಪದ ವ್ಯಕ್ತಿಯಾಗಿದ್ದರು.
ದೇಶ ಮಟ್ಟದ ಗಣ್ಯಾತಿ ಗಣ್ಯರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಸರಳ ವ್ಯಕ್ತಿಯಾಗಿದ್ದ ಡಾ.ಎಂ.ಪಿ ಕರ್ಕಿ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ,ಮಾಜಿ ಶಾಸಕಿ ಶಾರದಾ ಶೆಟ್ಟಿ,ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ವಿನೋದ ಪ್ರಭು,ಡಾ.ಜಿ.ಜಿ.ಹೆಗಡೆ, ಡಾ.ಎಸ್.ಎಸ್.ಹೆಗಡೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ,ಮಂಡಳ ಅಧ್ಯಕ್ಷ ಹೇಮಂತ ಗಾಂವಕರ,,ಖ್ಯಾತ ವಕೀಲರಾದ ಹೊನ್ನಾವರದ ಎಸ್.ಜಿ.ಹೆಗಡೆ,ದಿನೇಶ ಭಟ್ಟ,ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ..ಕಾಮತ್, ಕಾರ್ಯದರ್ಶಿ ಸುಧಾಕರ ನಾಯಕ, ತಾ.ಪಂ.ಮಾಜಿ ಅಧ್ಯಕ್ಷೆ ಯಶೋದಾ ಶಾಸ್ತ್ರಿ, ಗ್ರಾ.ಪಂ.ಸದಸ್ಯ ಎಂ.ಎಂ.ಹೆಗಡೆ.ಬಾಡ ಹವ್ಯಕ ವಲಯದ ಅಧ್ಯಕ್ಷ ಆರ್.ಎನ್.ಹೆಗಡೆ, ಉಪಾಧ್ಯಕ್ಷ ಎನ್.ವಿ.ಹೆಗಡೆ, ಕುಮಟಾ ಹವ್ಯಕ ಸಂಘದ ಎಂ.ಎನ್.ಹೆಗಡೆ,ನಿವೃತ್ತ ಪ್ರಾಚಾರ್ಯ ಡಾ.ಜಿ.ಎಸ್.ಭಟ್ಟ, ಹೊನ್ನಾವರದ ಎಸ್.ಡಿ.ಎಂ.ಕಾಲೇಜು ಪ್ರಾಚಾರ್ಯರಾದ ವಿಜಯ ಲಕ್ಷೀ ನಾಯ್ಕ,ಕೃಷ್ಣ ಮೂರ್ತಿ ಶಿವಾನಿ ಬುಕ್ ಸ್ಟಾಲ್ ಹೊನ್ನಾವರ,ಶ್ರೀಕಾಂತ ಭಟ್ಟ ಮೂರೂರು ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement