ಕೊಡ್ಲಗದ್ದೆ: ಪೌಷ್ಟಿಕ ಆಹಾರ ಮೇಳ

ಅಂಕೋಲಾ: ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡ್ಲಗದ್ದೆ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಪೌಷ್ಟಿಕ ಆಹಾರ ಮೇಳ ಸೋಮವಾರ (ಅಕ್ಟೋಬರ್‌ 18) ನಡೆಯಿತು.
ಸುಂಕಸಾಳದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ ನೀಡಲಾಯಿತು. ರಂಗವಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜ್ಞಾನವಿಕಾಸ ಸಂಘದ ಸದಸ್ಯರು ತಯಾರಿಸಿ ತಂದ ಪೌಷ್ಠಿಕ ಆಹಾರಗಳನ್ನು ಎಲ್ಲರೂ ಸವಿದರು. ಇವರೆಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ರಾಮನಗುಳಿ ಒಕ್ಕೂಟ ಅಧ್ಯಕ್ಷರಾದ ಪೂರ್ಣಿಮಾ ಹೆಗಡೆ , ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆ ದೀಪಾ ಸೇವಾ ಪ್ರತಿನಿಧಿ ತಿಮ್ಮಪ್ಪ ಪಟಗಾರ, ಹಾಗೂ ಮಾಹಿತಿದಾರರಾದ ಮಾರುತಿ ಅಂಬಿಗ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಕೊನೆಯಲ್ಲಿ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement